ADVERTISEMENT

ಮಗಳಿಗೆ ಉನ್ನತ ಹುದ್ದೆ ನೀಡಿದ ತಜಿಕಿಸ್ತಾನದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 19:30 IST
Last Updated 27 ಜನವರಿ 2016, 19:30 IST
ಮಗಳಿಗೆ ಉನ್ನತ ಹುದ್ದೆ ನೀಡಿದ ತಜಿಕಿಸ್ತಾನದ ಅಧ್ಯಕ್ಷ
ಮಗಳಿಗೆ ಉನ್ನತ ಹುದ್ದೆ ನೀಡಿದ ತಜಿಕಿಸ್ತಾನದ ಅಧ್ಯಕ್ಷ   

ದುಶಂಬೆ: ತಜಿಕಿಸ್ತಾನದ ಅಧ್ಯಕ್ಷ ಎಮೊಮಲಿ ರಖ್ಮೋನ್‌ ಅವರು ತಮ್ಮ ಹಿರಿಯ ಮಗಳು ಒಜೊಡಾ ರಖ್ಮೋನ್ (38) ಅವರನ್ನು ಉನ್ನತ ಹುದ್ದೆಯೊಂದಕ್ಕೆ ನಿಯೋಜಿಸಿದ್ದಾರೆ.

ಒಜೊಡಾ ಅವರು ತಂದೆಯ ಅಡಳಿತದಲ್ಲಿ 2014ರಿಂದ ಉಪ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ರಖ್ಮೋನ್ ಕಳೆದ ವರ್ಷವಷ್ಟೇ ತಮ್ಮ ಮಗ ರೊಷ್ತೊಮಿ ಅವರನ್ನು ಭ್ರಷ್ಟಾಚಾರ ನಿರ್ಮೂಲನಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.

ಜನಮತ ದೊರೆತಲ್ಲಿ ಎಮೊಮಲಿ ಅವರು ಇಚ್ಛಿಸಿದಷ್ಟು ಸಲ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಬಹುದು ಎನ್ನುವ ಬಗ್ಗೆ ಈ ತಿಂಗಳ ಆರಂಭದಲ್ಲಿ ತಜಿಕಿಸ್ತಾನದ ಸಂಸತ್‌ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು. ಆದರೆ, ಎಮೊಮಲಿ 2020ರ ತನಕ ಮಾತ್ರ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂದು ಸಂವಿಧಾನ ಅವಕಾಶ ಕಲ್ಪಿಸಿದೆ.

ಮಗಳಿಗಾಗಿ ಉನ್ನತ ಹುದ್ದೆ ನೀಡಿದ ಏಷ್ಯಾದ ನಾಯಕರಲ್ಲಿ ಎಮೊಮಲಿ ಮೊದಲಿಗರಲ್ಲ.   2015ರಲ್ಲಿ ಕಜಾಕ್‌ ಅಧ್ಯಕ್ಷ ನೂರ್ ಸುಲ್ತಾನ್‌ ನಜರ್‌ಬಯೆವ್ ತಮ್ಮ ಮಗಳು ದರಿಗಾ ಅವರನ್ನು ಉಪ ಪ್ರಧಾನಿಯನ್ನಾಗಿ ನೇಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.