ADVERTISEMENT

ಮಧ್ಯ ಆಫ್ರಿಕಾದಲ್ಲಿ 100 ಜನರ ಸಾವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST
ಫಿಲಿಪ್ಪೀನ್ಸ್‌ನ ದಕ್ಷಿಣ ದ್ವೀಪ ಜಂಬಾಂಗೊ ನಗರದಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು, ಸರ್ಕಾರಿ ಪಡೆಗಳು ಮತ್ತು ಮುಸ್ಲಿಂ ಬಂಡುಕೋರರ ನಡುವೆ ನಡೆದ ಘರ್ಷಣೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.  	– ಎಎಫ್‌ಪಿ ಚಿತ್ರ
ಫಿಲಿಪ್ಪೀನ್ಸ್‌ನ ದಕ್ಷಿಣ ದ್ವೀಪ ಜಂಬಾಂಗೊ ನಗರದಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು, ಸರ್ಕಾರಿ ಪಡೆಗಳು ಮತ್ತು ಮುಸ್ಲಿಂ ಬಂಡುಕೋರರ ನಡುವೆ ನಡೆದ ಘರ್ಷಣೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. – ಎಎಫ್‌ಪಿ ಚಿತ್ರ   

ಬಂಗೈ (ಐಎಎನ್‌ಎಸ್‌): ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಮಾಜಿ ಅಧ್ಯಕ್ಷ  ಫ್ರಾನ್ಸಿಸ್ ಬೊಜೈಜೆ ಬೆಂಬಲಿಗರು ಮತ್ತು ಅಧ್ಯಕ್ಷ ಮೈಕೆಲ್‌ ಡಿಜೊಟೊಡಿಯಾ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಡಿಜೊಟೊಡಿಯಾ ಬೊಜೈಜೆ ಅವರನ್ನು ಪದಚ್ಯುತ ಮೈಕೆಲ್‌ ಡಿಜೊಟೊಡಿಯಾ ಸ್ಥಿತ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆ. 18ರಂದು ಪ್ರಮಾಣ­ವಚನ ಸ್ವೀಕರಿಸಿದ್ದರು. ಈ ದಿಢೀರ್‌ ಕಾರ್ಯಾಚರಣೆಗೆ ಮಧ್ಯ ಆಫ್ರಿಕಾದಲ್ಲಿ ತೀವ್ರವಾಗಿ ಖಂಡನೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ  ಫ್ರಾನ್ಸಿಸ್ ಬೊಜೈಜೆ ಬೆಂಬಲಿಗರು ಮತ್ತು ಅಧ್ಯಕ್ಷ ಮೈಕೆಲ್‌ ಡಿಜೊಟೊಡಿಯಾ ಬೆಂಬಲಿಗರ ನಡುವೆ  ಘರ್ಷಣೆ ಉಂಟಾಗಿದ್ದು, ಇದರಿಂದ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾಕ್‌ ಹಿಂಸಾಚಾರ: 45 ಬಲಿ
ಬಾಗ್ದಾದ್‌ (ಐಎಎನ್‌ಎಸ್‌): ಇರಾಕಿನಲ್ಲಿ ಬುಧವಾರವೂ ಮುಂದುವರಿದಿರುವ ಹಿಂಸಾಚಾರಕ್ಕೆ 45ಮಂದಿ ಬಲಿ­ಯಾಗಿದ್ದು, 63 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಗ್ದಾದ್‌ನ ಮಸೀದಿಯೊಂದರ ಬಳಿ  ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಕನಿಷ್ಠ 30 ಮಂದಿ ಸತ್ತು, 55 ಜನ ಗಾಯಗೊಂಡಿದ್ದಾರೆ. ಮೊಸೊಲ್ ಪಟ್ಟಣದ ಚೆಕ್‌ಪಾಯಿಂಟ್‌­ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿ ಸೇರಿದಂತೆ ಒಟ್ಟು ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ಮಸೀದಿ ಆವರಣದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇರಾಕಿನಾದ್ಯಂತ ನಡೆಯುತ್ತಿರುವ ದಾಳಿ ಕುರಿತ ಹೊಣೆ ಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.