ADVERTISEMENT

ಮರುಬಳಕೆ ಇಂಧನ: ಈಜಿಪ್ಟ್‌ನಲ್ಲಿ ಪ್ರಾಯೋಗಿಕ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಕೈರೊ (ಪಿಟಿಐ): ಈಜಿಪ್ಟ್ ಜತೆಗೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಹಾಗೂ ದೇಶದ ಪವನ ಮತ್ತು ಸೌರ ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಖಾಸಗಿ ಕ್ಷೇತ್ರದವರು ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ ಮರುಬಳಕೆ ಇಂಧನದ ಪ್ರಾಯೋಗಿಕ ಯೋಜನೆಯೊಂದನ್ನು ಈಜಿಪ್ಟ್‌ನಲ್ಲಿ ಆರಂಭಿಸಲು ಭಾರತ ನಿರ್ಧರಿಸಿದೆ.

ಈಜಿಪ್ಟ್ ಪ್ರವಾಸದಲ್ಲಿರುವ ಮರುಬಳಕೆ ಇಂಧನ ಸಚಿವ ಫಾರೂಕ್ ಅಬ್ದುಲ್ಲ ಅವರ ಸಮ್ಮುಖದಲ್ಲಿ ಈ ಬಗೆಗಿನ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಸಚಿವರ ಜತೆ ಪವನ ಮತ್ತು ಸೌರ ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಮಂದಿಯ ನಿಯೋಗವೂ ಇಲ್ಲಿಗೆ ಆಗಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.