ADVERTISEMENT

ಮರ್ಕೆಲ್‌ 3ನೇ ಬಾರಿಗೆ ಜರ್ಮನಿ ಚಾನ್ಸಲರ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಏಂಜೆಲಾ ಮರ್ಕೆಲ್‌
ಏಂಜೆಲಾ ಮರ್ಕೆಲ್‌   

ಬರ್ಲಿನ್‌ (ಪಿಟಿಐ): ವಿವಿಧ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಏಂಜೆಲಾ ಮರ್ಕೆಲ್‌ ಅವರು ಮೂರನೇ ಬಾರಿಗೆ ಜರ್ಮನಿ ಚಾನ್ಸಲರ್‌ ಆಗಿ ಆಯ್ಕೆಯಾಗುವಲ್ಲಿ ಯಶಸ್ವಿ ಯಾಗಿದ್ದು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸೆಪ್ಟೆಂಬರ್‌ 22ರಂದು ನಡೆದ ಚುನಾವಣೆಯಲ್ಲಿ ಅಗತ್ಯ ಬಹುಮತ ಗಳಿಸುವಲ್ಲಿ ಮರ್ಕೆಲ್‌ ವಿಫಲರಾಗಿದ್ದ ರು. ಈಗ  ವಿರೋಧ ಪಕ್ಷವಾದ ಸೋಷಿ ಯಲ್‌ ಡೆಮಾಕ್ರೆಟಿಕ್‌ ಜತೆ ಸುದೀರ್ಘ ಸಂಧಾನ ನಡೆಸಿ ಬೆಂಬಲ ಪಡೆಯುವಲ್ಲಿ ಯಶಸ್ವಿ ಆಗಿರುವುದರಿಂದ ಜರ್ಮನಿಯ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿದೆ.

621 ಸದಸ್ಯರನ್ನು ಹೊಂದಿರುವ ಸಂಸತ್ತಿನಲ್ಲಿ ಮರ್ಕೆಲ್‌ ಅವರ ಪರ 462 ಮತ್ತು ವಿರೋಧವಾಗಿ 150 ಮತಗಳು ಚಲಾವಣೆಯಾದವು.
ಮಹಾ ಯುದ್ಧದ ನಂತರ ಮೂರನೇ ಬಾರಿಗೆ ಸತತವಾಗಿ ಚಾನ್ಸಲರ್ ಹುದ್ದೆಗೆ ಏರುತ್ತಿರುವ ಪ್ರಥಮ ಮಹಿಳೆ ಏಂಜೆಲಾ ಮರ್ಕೆಲ್‌.
ಈ ಹಿಂದೆ ಹೆಲ್ಮುಟ್‌ ಮತ್ತು ಕೊನಾರ್ಡ್ ಅವರು ಸತತ ಮೂರು ಬಾರಿ ಚಾನ್ಸಲರ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.