ADVERTISEMENT

ಮರ್ಡೊಕ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ):  ದೇಶದ ಶಿಕ್ಷಣ ಪದ್ಧತಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮಾಧ್ಯಮ ದೊರೆ ರೂಪರ್ಟ್ ಮರ್ಡೊಕ್  ವಿರುದ್ಧ `ಆಕ್ಯುಪೈ ವಾಲ್‌ಸ್ಟ್ರೀಟ್~ ಸಂಘಟನೆಯ ಕಾರ್ಯಕರ್ತರು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪ್ರತಿಭಟನೆ ನಡೆಸಿ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.

ಫ್ಲೊರಿಡಾದ ಮಾಜಿ ಗವರ್ನರ್ ಜೆಬ್ ಬುಷ್ ಪ್ರತಿಷ್ಠಾನದ ವತಿಯಿಂದ  ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮರ್ಡೊಕ್ ಪ್ರಧಾನ ಭಾಷಣ ಮಾಡುತ್ತಿದ್ದಾಗ ಸಂಘಟನೆ ಕೆಲ ಕಾರ್ಯಕರ್ತರು ಸಮಾರಂಭದಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದರೆ, ಹಲವರು ಸಭೆಯಲ್ಲಿಯೇ ಭಾಷಣಕ್ಕೆ ಅಡ್ಡಿಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.