ADVERTISEMENT

ಮಲ್ಯ ಸಂಭಾವನೆ ರೂ 1.5 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಮದ್ಯದ ದೊರೆ ವಿಜಯ್ ಮಲ್ಯ 2012ನೇ ಸಾಲಿನಲ್ಲಿ ಎರಡು ಸಾಗರೋತ್ತರ ಕಂಪೆನಿಗಳಿಂದ ರೂ 1.5 ಕೋಟಿ ಸಂಭಾವನೆ ಪಡೆದಿದ್ದಾರೆ. ಕಳೆದ ವರ್ಷವೂ ಇಷ್ಟೇ ವೇತನ ಪಡೆದುಕೊಂಡಿದ್ದರು.

ಮೆಂಡೊಸಿನೊ ಬ್ರಿವಿಂಗ್ ಕಂಪೆನಿಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಗೆ ನೀಡಲಾದ 1,20,000 ಅಮೆರಿಕನ್ ಡಾಲರ್ ಸೇರಿದಂತೆ 2012ರಲ್ಲಿ ಒಟ್ಟು ರೂ 1,47 ಕೋಟಿ ವೇತನ ಪಡೆದಿದ್ದಾರೆ ಎಂದು ಅಮೆರಿಕದ ಕಂಪೆನಿ ತಿಳಿಸಿದೆ.

ಯುನೈಟೆಡ್ ಬ್ರಿವರೀಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ವಸ್ತುಗಳನ್ನು ಯು.ಕೆ. ಹೊರಗಡೆ ಪ್ರಚಾರ ಮಾಡಿದಕ್ಕಾಗಿ ಮಲ್ಯ ಅವರಿಗೆ 1,43,700 ಅಮೆರಿಕನ್ ಡಾಲರ್ ಪಾವತಿಸಲಾಗಿತ್ತು.

ಮೆಂಡೊಸಿನೊ ಕಂಪೆನಿಯಲ್ಲಿ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಶೇ 68.1ರಷ್ಟು ಬಂಡವಾಳ ಹೊಂದಿದ್ದರೆ, ಅಮೆರಿಕದ ಯುನೈಟೆಡ್ ಬ್ರಿವರೀಸ್ ಶೇ 24.5ರಷ್ಟು ಪಾಲು ಹೊಂದಿದೆ. ವಿದೇಶದ ಮಾರುಕಟ್ಟೆಗಳಲ್ಲಿ ಕಿಂಗ್‌ಫಿಷರ್ ಪ್ರೀಮಿಯಮ್ ಬಿಯರ್ ತಯಾರಿಕೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಅಧಿಕೃತ ಪರವಾನಗಿ ಹೊಂದಿವೆ.

ಅಮೆರಿಕ, ಕೆನಡಾ ಮತ್ತು ಐರೋಪ್ಯ ಮಾರುಕಟ್ಟೆಗಳಲ್ಲಿ ಕಂಪೆನಿ ವ್ಯವಹಾರ ನಡೆಯುತ್ತಿದ್ದು, ಮಲ್ಯ ಇದರ ಅಧ್ಯಕ್ಷರಾಗಿದ್ದಾರೆ. ಇದರ ಮುಖ್ಯ ಪಾಲುದಾರಿಕೆ ಯುಬಿ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್‌ಎಲ್) ಹೊಂದಿದೆ. ಭಾರತದಲ್ಲಿನ ಮಲ್ಯ ಒಡೆತನದ ಯುಬಿ ಸಮೂಹದ ಎಲ್ಲ ಕಂಪೆನಿಗಳ ಮೇಲೆ ಹಿಡಿತ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.