ಸ್ಯಾನ್ ಡಿಯಾಗೊ (ಐಎಎನ್‌ಎಸ್): ಮೆಕ್ಸಿಕೊದ ಕುಖ್ಯಾತ ಮಾದಕವಸ್ತುಗಳ ಕಳ್ಳಸಾಗಣೆದಾರ ಬೆಂಜಮಿನ್ ಆರಲೆನೊ ಫೆಲಿಕ್ಸ್‌ಗೆ ಅಮೆರಿಕದ ಫೆಡರಲ್ ಕೋರ್ಟ್ ಸೋಮವಾರ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷವಷ್ಟೇ ಫೆಲಿಕ್ಸ್ 9 ವರ್ಷಗಳ ಶಿಕ್ಷೆ ಪೂರೈಸಿದ್ದು ಆತನ ಮೇಲ್ಮನವಿಯನ್ನು ಅಮೆರಿಕದ ಕೋರ್ಟ್ ತಿರಸ್ಕರಿಸಿತ್ತು. ಮತ್ತೊಬ್ಬ ಮಾದಕವಸ್ತುಗಳ ಕಳ್ಳ ಸಾಗಣೆದಾರ ಜೀಸಸ್ ಲಾಬ್ರಾ ಎವಿಲಿಸ್ ಎಂಬಾತನಿಗೂ 2010ರಲ್ಲಿ 40 ವರ್ಷ ಶಿಕ್ಷೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.