ADVERTISEMENT

ಮಾಲ್ಡೀವ್ಸ್‌ ಮತ್ತೆ ಹಿಂಸಾಚಾರ: ಸಂಸತ್ತಿನಲ್ಲೂ ಕಲ್ಲುತೂರಾಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:30 IST
Last Updated 1 ಮಾರ್ಚ್ 2012, 8:30 IST

ಮಾಲೆ (ಪಿಟಿಐ/ಐಎಎನ್‌ಎಸ್): ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಈ ಬಾರಿ ಸಂಸತ್ ಒಳಗೂ ಘರ್ಷಣೆ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.

ಗುರುವಾರ ಸಂಸತ್ತನ್ನು ಉದ್ದೇಶಿಸಿ ಹೊಸ ಅಧ್ಯಕ್ಷ ಮಹಮದ್ ವಹೀದ್ ಹಸನ್ ಅವರು ಮಾತನಾಡಲಿದ್ದರು. ಆದರೆ ಪದಚ್ಯುತ ಮಾಜಿ ಅಧ್ಯಕ್ಷ ಮಹಮದ್ ನಶೀದ್ ಅವರ ಸಹೋದರ ನಜೀಮ್ ಸತ್ತಾರ್ ಅವರ ನೇತೃತ್ವದಲ್ಲಿ ಗುಂಪುಗೂಡಿದ ಬೆಂಬಲಿಗರು ನೇರ ಸಂಸತ್‌ಗೆ ಲಗ್ಗೆ ಇಟ್ಟು, ಅಧ್ಯಕ್ಷ ವಹೀದ್ ಕೂರುವ ಕುರ್ಚಿಯನ್ನು ಕಿತ್ತೆಸೆದರು.

ಈ ಹಂತದಲ್ಲಿ ಪೊಲೀಸರಿಗೂ ಪ್ರತಿಭಟನಾಕಾರರಿಗೂ ಭಾರಿ ಘರ್ಷಣೆ ಸಂಭವಿಸಿತು. ಪ್ರತಿಭಟನಾಕಾರರು ಮನಸೋಇಚ್ಛೆ ಕಲ್ಲು ತೂರಾಟದಲ್ಲಿ ತೊಡಗಿದ್ದರಿಂದ ಹಲವು ಪೊಲೀಸರು ಗಾಯಗೊಂಡರು.
ಈ ಸಂದರ್ಭದಲ್ಲಿ ನಜೀಮ್ ಸೇರಿದಂತೆ 30 ಮಂದಿಯನ್ನು ಪೊಲೀಸರು ಬಂಧಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.