
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್ (ಪಿಟಿಐ): ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ರಾಜಾಸ್ತಾನದ ಅಜ್ಮೇರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಛಿಸ್ತಿ ಅವರ ದರ್ಗಾಕ್ಕೆ ಏ. 8ರಂದು ನೀಡುವ ಸಾಧ್ಯತೆ ಇದೆ.ಸೂಫಿ ಸಂತ ಛಿಸ್ತಿ ಅವರ ದರ್ಗಾಕ್ಕೆ ಜರ್ದಾರಿ ಅವರು ಖಾಸಗಿ ಭೇಟಿ ನೀಡುವ ಮನವಿಗೆ ಭಾರತ ಸ್ಪಂದಿಸಿದ್ದು, ದಿನಾಂಕ ನಿಗದಿಗೊಳ್ಳಬೇಕಿದೆ ಎಂದು ಪಾಕ್ ಸರ್ಕಾರದ ಮೂಲಗಳು ಹೇಳಿವೆ.
ಆದರೆ, ಭಾರತ ಸರ್ಕಾರದ ಮೂಲಗಳು ಏ. 8ರಂದು ಅವರು ಅಜ್ಮೇರ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದೆ.ಇದು ಖಾಸಗಿ ಭೇಟಿ ಎಂದು ಪಾಕ್ ಸರ್ಕಾರ ಹೇಳಿದ್ದರೂ ಜರ್ದಾರಿ ಭಾರತದ ಕೆಲವು ಮುಖಂಡರನ್ನು ಈ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.