ADVERTISEMENT

ಮುನ್ನಿ ಬದ್‌ನಾಮ್.... ಗಿನ್ನಿಸ್ ದಾಖಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 16:55 IST
Last Updated 14 ಮಾರ್ಚ್ 2011, 16:55 IST

ಮೆಲ್ಬರ್ನ್ (ಪಿಟಿಐ): ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಿರುವ ಸೂಪರ್ ಹಿಟ್ ಚಿತ್ರ ‘ದಬಾಂಗ್’ನ ‘ಮುನ್ನಿ ಬದ್‌ನಾಮ್ ಹುಯಿ... ಡಾರ್ಲಿಂಗ್ ತೇರೆ ಲಿಯೇ..’ ಹಾಡು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ದಾಖಲಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.

‘ಇಂಡಿಯನ್ ಫಿಲ್ಮ್  ಫೆಸ್ಟಿವಲ್ -2011’ರ ನಿರ್ದೇಶಕ ಮಿತು ಭೋವ್‌ಮಿಕ್ ಲಾಂಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲೈಕಾ ನೇತೃತ್ವದಲ್ಲಿ 1200 ಜನರು ಮೂರು ನಿಮಿಷಗಳ ಕಾಲ ಈ ಹಾಡಿಗೆ ನೃತ್ಯ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದರು. ಕಳೆದ ವಾರಾಂತ್ಯದಲ್ಲಿ ಮೆಲ್ಬರ್ನ್ ಉದ್ಯಾನವನದಲ್ಲಿ ಈ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೊಸ ದಾಖಲೆ ನಿರ್ಮಿಸಿದ್ದಕ್ಕಾಗಿ ಮಲೈಕಾ ಭಾನುವಾರ ಪ್ರಮಾಣ ಪತ್ರ ಪಡೆದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.