ADVERTISEMENT

ಮುಬಾರಕ್ ಆಸ್ತಿ: ಬ್ರಿಟನ್‌ನಲ್ಲಿ ತನಿಖೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST
ಮುಬಾರಕ್ ಆಸ್ತಿ: ಬ್ರಿಟನ್‌ನಲ್ಲಿ ತನಿಖೆ
ಮುಬಾರಕ್ ಆಸ್ತಿ: ಬ್ರಿಟನ್‌ನಲ್ಲಿ ತನಿಖೆ   


ಲಂಡನ್ (ಪಿಟಿಐ):
  ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಮತ್ತು ಅವರ ಕುಟುಂಬದ ಸದಸ್ಯರು ಬ್ರಿಟನ್‌ನಲ್ಲಿ ಬಚ್ಚಿಟ್ಟುಕೊಂಡಿರಬಹುದಾದ ಆಸ್ತಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ದೇಶದ ವಂಚನೆ ತನಿಖಾ ದಳ ನಿರತವಾಗಿದೆ ಎಂದು ‘ದಿ ಸಂಡೇ ಟೈಮ್ಸ್’ ವರದಿ ಮಾಡಿದೆ.

ಮುಬಾರಕ್ ಮತ್ತು ಅವರ ಕುಟುಂಬದವರಿಗೆ ಸೇರಿದ 1.5 ಶತಕೋಟಿ ಪೌಂಡ್‌ಗೂ ಅಧಿಕ ಹಣ ಬ್ರಿಟಿಷ್ ಮತ್ತು ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಬಗ್ಗೆ ಗುಮಾನಿ ಇದ್ದು, ಲಂಡನ್, ನ್ಯೂಯಾರ್ಕ್ ಮತ್ತು ಲಾಸ್ ಏಂಜಲಿಸ್‌ನಲ್ಲಿ ಆಸ್ತಿಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.ಬ್ರಿಟನ್‌ನಲ್ಲಿರುವ ಮುಬಾರಕ್ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳುವ ಸಲುವಾಗಿ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಡೆದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.