ಇಸ್ಲಾಮಾಬಾದ್ (ಪಿಟಿಐ): ಒಂದೇ ಕುಟುಂಬದ ಐವರು ಯುವತಿಯರ ಮೇಲೆ ಭೂಮಾಲಿಕ ಹಾಗೂ ಆತನ ಸಹಚರರು ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನುಷ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ಮೊಹಮ್ಮದ್ ಬೂಟಾ ತಾನು ಮಾಡಿದ ಕೆಲಸಕ್ಕೆ ವೇತನ ನೀಡುವಂತೆ ಆಗ್ರಹಿಸಿದ್ದ. ಇದರಿಂದ ಸಿಟ್ಟಿಗೆದ್ದ ಭೂಮಾಲಿಕರಾದ ಮಾರಾ ಜಾತ್ ಮತ್ತು ಜಹೀರ್ ಜಾತ್, ಬೂಟಾ ಹಾಗೂ ಆತನ ಪತ್ನಿಯನ್ನು ಕಟ್ಟಿಹಾಕಿ, ಅವರ ಐವರು ಪುತ್ರಿಯರ ಮೇಲೆ ಅತ್ಯಾಚಾರವೆಸಗಿದರು ಎಂದು ವರದಿ ಯಾಗಿದೆ.
ಮನೆಯಲ್ಲಿದ್ದ ಯುವತಿಯರನ್ನು ಅಪಹರಿಸಿಕೊಂಡು ಹೋಗಿ ಹೊಲದಲ್ಲಿ ಅತ್ಯಾಚಾರ ನಡೆಸಲಾಯಿತು ಎಂದು ಅವರು ಕುಟುಂಬದ ಸದಸ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.