ಲಾಹೋರ್ (ಪಿಟಿಐ): ಕಾಶ್ಮೀರಿಗಳ ಸಾವಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಕಾರಣ ಎಂದು ಆರೋಪಿಸಿರುವ ನಿಷೇಧಿತ ಜಮಾತ್ ಉದ್–ದವಾ (ಜೆಯುಡಿ) ಸಂಘಟನೆ ಮುಖ್ಯಸ್ಥ , ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಪಾಕ್‌ಗೆ ರಾಜನಾಥ್ ಭೇಟಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಆಗಸ್ಟ್ 4ರಂದು ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಗೃಹಸಚಿವರ 7ನೇ ಸಮ್ಮೇಳನದಲ್ಲಿ ರಾಜನಾಥ್ ಸಿಂಗ್ ಅವರು ಭಾಗವಹಿಸಲಿದ್ದಾರೆ.
ಅಮಾಯಕ ಕಾಶ್ಮೀರಿಗಳ ಸಾವಿಗೆ ಕಾರಣವಾದ ರಾಜನಾಥ್ ಅವರನ್ನು ಸಮಾವೇಶಕ್ಕೆ ಸ್ವಾಗತಿಸುವ ಮೂಲಕ ಪಾಕಿಸ್ತಾನ ಸರ್ಕಾರ ಕಾಶ್ಮೀರ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಅವಮಾನ ಮಾಡುತ್ತಿದೆ ಎಂದು ಹಫೀಜ್ ಆರೋಪಿಸಿದ್ದಾರೆ.
ಆಗಸ್ಟ್ 3 ರಂದು ರಾಜನಾಥ್ ಸಿಂಗ್ ಅವರು ಇಸ್ಲಾಮಾಬಾದ್‌ಗೆ ಬಂದರೆ ಜೆಯುಡಿ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ. ಕರಾಚಿ, ಪೇಶಾವರ, ಮುಲ್ತಾನ್, ಫೈಸಲಾಬಾದ್, ಮುಜಾಫರಾಬಾದ್ ಸೇರಿದಂತೆ ಇನ್ನಿತರ ನಗರಗಳಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.