
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್(ಪಿಟಿಐ): ಅಲ್‌ಖೈದಾ ಉಗ್ರ ಲಾಡೆನ್ ಅಮೆರಿಕ ಯೋಧರಿಂದ ಹತ್ಯೆಯಾಗುವ ಸಂದರ್ಭದಲ್ಲಿ ಆತನ ಜತೆಗಿದ್ದ ಆತನ ಮೂವರು ಪತ್ನಿಯರೂ ಸೇರಿದಂತೆ ಕುಟುಂಬದ ಸದಸ್ಯರನ್ನು ಒಂಬತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪಾಕಿಸ್ತಾನ ಕೋರ್ಟ್ ಆದೇಶಿಸಿದೆ.
ಬಿನ್ ಲಾಡೆನ್‌ನ ಕಿರಿಯ ಪತ್ನಿ ಯೆಮನ್ ಮೂಲದ ಅಮಲ್ ಅಬ್ದುಲ್‌ಫತಾ ಹಾಗೂ ಅವಳ ಐವರು ಮಕ್ಕಳನ್ನು ಶನಿವಾರ ನ್ಯಾಯಾಂಗ ಒಪ್ಪಿಸಲಾಗಿದೆ. ಪಾಕಿಸ್ತಾನಕ್ಕೆ ಕಾನೂನು ಬಾಹಿರವಾಗಿ ಬಂದು ವಾಸಿಸುತ್ತಿದ್ದ ಆರೋಪ ಇವರ ಮೇಲಿದೆ.
ಸಧ್ಯಕ್ಕೆ ಇಸ್ಲಾಮಾಬಾದ್‌ನಲ್ಲಿ ಇವರು ವಾಸಿಸುತ್ತಿರುವ ಮನೆಯನ್ನೇ ಉಪ ಬಂದಿಖಾನೆಯಾಗಿ ಘೋಷಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಈ ನಿವಾಸದಲ್ಲಿಯೇ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.