ADVERTISEMENT

ಲಿಬಿಯಾ: ಸಂವಿಧಾನ ರಚನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಟ್ರಿಪೋಲಿ (ಎಪಿ):  ದೇಶಕ್ಕೆ ಹೊಸ ಸಂವಿಧಾನ  ರಚಿಸುವ ಉದ್ದೇಶದಿಂದ ಕರಡು ಸಮಿತಿಯೊಂದನ್ನು ನೇಮಕ ಮಾಡುವ ಸಂಬಂಧ ಲಿಬಿಯಾದ ಮಧ್ಯಂತರ ಸರ್ಕಾರವು ಹೊಸ ಪ್ರಸ್ತಾವವನ್ನು ಮುಂದಿಟ್ಟಿದೆ.

ಮಧ್ಯಂತರ ಸರ್ಕಾರ ಮಾಡಿರುವ ಪ್ರಸ್ತಾವದ ವಿವರಗಳನ್ನು ರಾಷ್ಟ್ರೀಯ ಸಂಧಿಕಾಲದ ಮಂಡಳಿಯ (ಎನ್‌ಟಿಸಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಮುಅಮ್ಮರ್ ಗಡಾಫಿ ಪದಚ್ಯುತಿ ನಂತರ ದೇಶದಲ್ಲಿ ಹೊಸ ಸರ್ಕಾರವನ್ನು ರಚಿಸುವ ಪ್ರಯತ್ನದಲ್ಲಿ ಇದು ಮೊದಲ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರಡು ಸಮಿತಿಯ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಗಢಾಫಿ ಬೆಂಬಲಿಗರು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಮುಅಮ್ಮರ್ ಗಢಾಫಿ ಅವರ 42 ವರ್ಷಗಳ ಸರ್ವಾಧಿಕಾರಿ ಆಡಳಿತ ಕೊನೆಗೊಂಡ ಬಳಿಕ ಲಿಬಿಯಾದಲ್ಲಿ  ಹೊಸ ಸರ್ಕಾರ ರಚನೆಯ ಗಂಭೀರ ಸವಾಲು ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.