‘ಲಾಸ್ ಏಂಜಲೀಸ್: ಗಾಲ್ ಗ್ಯಾಡತ್ ನಟಿಸಿರುವ ‘ವಂಡರ್ ವುಮನ್’ ಚಲನಚಿತ್ರವು ಜಗತ್ತಿನಲ್ಲಿಯೇ ‘ನಂಬರ್ ಒನ್ ಸಿನಿಮಾ’ ಎಂಬ ಪಟ್ಟಕ್ಕೇರಿದೆ.
ಪ್ಯಾಟಿ ಜೆಂಕಿನ್ಸ್ ನಿರ್ದೇಶನದ ಈ ಚಿತ್ರ ಮೊದಲ ದಿನವಾದ ಜೂನ್ 2ರಂದು ₹661ಕೋಟಿ ಗಳಿಸಿತ್ತು. ಇದುವರೆಗೆ ಇದರ ಗಳಿಕೆ ₹738ಕೋಟಿ. ಇದು ಡಿಸಿ ಕಾಮಿಕ್ಸ್ ಕಥೆ ಸರಣಿ ಆಧರಿತ ಸಿನಿಮಾ. ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಗಾಲ್ ಗ್ಯಾಡತ್ ಫೇಸ್ಬುಕ್ನಲ್ಲಿ ಹಾಕಿರುವ ಸಂದೇಶಕ್ಕೆ ಗುರುವಾರ ಒಂದೇ ದಿನ ಸುಮಾರು 14ಲಕ್ಷ ಜನರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.