ADVERTISEMENT

ವಿಕಿರಣಯುಕ್ತ ನೀರು ಪೆಸಿಫಿಕ್ ಸಮುದ್ರಕ್ಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಟೋಕಿಯೊ (ಎಎಫ್‌ಪಿ): ಭೂಕಂಪ ಮತ್ತು ಸುನಾಮಿಯಿಂದ ಹಾನಿಗೊಳಗಾದ ಫುಕುಶಿಮಾ ಅಣು ಸ್ಥಾವರದಿಂದ ಸುಮಾರು 12 ಟನ್‌ನಷ್ಟು ವಿಕಿರಣಯುಕ್ತ ನೀರು ಪೆಸಿಫಿಕ್ ಸಮುದ್ರಕ್ಕೆ ಹರಿದು ಹೋಗಿರುವ ಸಾಧ್ಯತೆ ಇದೆ ಎಂದು ಟಿಇಪಿಸಿಒ ಅಧಿಕಾರಿಯೊಬ್ಬರು ಹೇಳಿದ್ದಾರೆ. 

 ತಾತ್ಕಾಲಿಕ ಶುದ್ಧಿಕರಣ ಘಟಕದ ಜತೆ  ಜೋಡಿಸಲಾಗಿದ್ದ ಪೈಪ್‌ನಿಂದ ವಿಕಿರಣಯುಕ್ತ ನೀರು ಸೋರಿಕೆಯಾಗಿದೆ ಎಂದಿರುವ ಟಿಇಪಿಸಿಒ, ಸೋರಿಕೆಗಿಂತ ಮೊದಲೇ ನೀರು ಒಂದು ಪ್ರಮಾಣದಲ್ಲಿ  ಸ್ವಚ್ಛಗೊಂಡಿತ್ತು ಎಂದು ಹೇಳಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.