ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಎಚ್1ಬಿ ವೀಸಾ: ಮೊದಲ ದಿನವೇ ಅರ್ಜಿ ಮಹಾಪೂರ
ವಾಷಿಂಗ್ಟನ್ (ಪಿಟಿಐ):
ಅಮೆರಿಕದಲ್ಲಿ ಕೆಲಸ ಮಾಡಲು ಅಗತ್ಯವಾಗಿರುವ ಎಚ್-1ಬಿ ವೀಸಾ ಪಡೆಯುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದ್ದ ಮೊದಲ ದಿನವೇ ಸುಮಾರು ಐವತ್ತು ಸಾವಿರದಷ್ಟು ಅರ್ಜಿಗಳು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗಕ್ಕೆ (ಯುಎಸ್‌ಸಿಐಎಸ್) ಬಂದಿವೆ.

ಪಾಕ್ ಮೇಲೆ ರಕ್ಷಣಾ ನಿರ್ಬಂಧ ಸಡಿಲ
ವಾಷಿಂಗ್ಟನ್ (ಪಿಟಿಐ)
: ಅಮೆರಿಕವು ಪಾಕಿಸ್ತಾನಕ್ಕೆ ಪ್ರಮುಖ ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡುವುದರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸುವ ಮೂಲಕ ಕಳೆದ ಆರು ತಿಂಗಳ ಅವಧಿಯಲ್ಲಿ ಆ ದೇಶಕ್ಕೆ ಮತ್ತೊಮ್ಮೆ ವಿನಾಯ್ತಿ ನೀಡಲು ಮುಂದಾಗಿದೆ.

ವಿಮಾನ ಪುನರಾರಂಭವಿಲ್ಲ: ಏರ್‌ಏಷ್ಯಾ ಎಕ್ಸ್
ಕ್ವಾಲಾಲಂಪುರ (ಪಿಟಿಐ):
ಮುಂದಿನ ವರ್ಷದವರೆಗೆ ಭಾರತ ಮತ್ತು ಯೂರೋಪ್‌ಗೆ ವಿಮಾನಯಾನ ಸೇವೆಯನ್ನು ಪುನರಾರಂಭಿಸುವ ಯೋಜನೆ ಹೊಂದಿಲ್ಲ ಎಂದು ಏರ್ ಏಷ್ಯಾ ಎಕ್ಸ್ ತಿಳಿಸಿದೆ.

ಮೋದಿಗೆ ಅಮೆರಿಕ ವೀಸಾ ಸದ್ಯಕ್ಕಿಲ್ಲ: ಸ್ಪಷ್ಟನೆ
ವಾಷಿಂಗ್ಟನ್ (ಪಿಟಿಐ)
: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನೀಡದಿರುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. `ಆದರೆ ಮೋದಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಆಧಾರದಲ್ಲಿ ಇದನ್ನು ಪುನರ್‌ಪರಿಶೀಲಿಸಲಾಗುವುದು' ಎಂದು ತಿಳಿಸಿದೆ.

ಕೊಲ್ಲಿ ಕಾರ್ಮಿಕರಿಗೆ ಪಿಂಚಣಿಗೆ ಆಗ್ರಹ
ದುಬೈ (ಪಿಟಿಐ):
ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡು ಹೆಚ್ಚಿನ ಉಳಿತಾಯವಿಲ್ಲದೆ ಸ್ವದೇಶಕ್ಕೆ ಆಗಮಿಸುವ ಕಾರ್ಮಿಕರಿಗೆ ಪಿಂಚಣಿ ಯೋಜನೆ ರೂಪಿಸುವಂತೆ ಕೊಲ್ಲಿ ಕಾರ್ಮಿಕ ಕಲ್ಯಾಣ ಸಂಘಟನೆಯಾದ ಪ್ರವಾಸಿ ಬಂಧು ಕಲ್ಯಾಣ ಟ್ರಸ್ಟ್‌ನ ಅಧ್ಯಕ್ಷ ಕೆ.ವಿ. ಶಂಷುದ್ದೀನ್ ಅವರು, ಕೇರಳ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ತಮಾಂ ಒಮ್ಮತದ ಅಭ್ಯರ್ಥಿ
ಬೈರೂತ್ (ಎಎಫ್‌ಪಿ):
ಲೆಬನಾನ್ ಪ್ರಧಾನಿ ಹುದ್ದೆಗೆ ತಮಾಂ ಸಲಾಂ ಅವರು ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ತಿಂಗಳ 22ರಂದು ನಜೀಬ್ ಮಿಕಟಿ ಅವರು ಪ್ರಧಾನಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.