ADVERTISEMENT

ವಿದ್ಯುತ್ ತಂತಿ ಹರಿದು 16 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ರಿಯೊ ಡಿ ಜನೈರೊ (ಐಎಎನ್‌ಎಸ್): ಬ್ರೆಜಿಲ್‌ನ ದಕ್ಷಿಣ ಭಾಗದ ಮಿನಾಸ್ ಗೆರಿಯಾಸ್ ರಾಜ್ಯದ ಬಂಡೈರಾ ಡೊ ಸುಲ್ ಎಂಬಲ್ಲಿ ಭಾನುವಾರ ಉತ್ಸವವೊಂದರ ಪೂರ್ವಭಾವಿಯಾಗಿ ನಡೆದ ಮೆರವಣಿಗೆಯೊಂದರ ಮೇಲೆ ವಿದ್ಯುತ್ ತಂತಿ ಬಿದ್ದುದರಿಂದ 16 ಮಂದಿ ಸತ್ತು, 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡರು. ಬೃಹತ್ ಗಾತ್ರದ ಸ್ಪೀಕರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ನ ಮೇಲೆ ತಂತಿ ಬಿದ್ದುದರಿಂದ ಅದರಲ್ಲಿದ್ದ ಜನರು ಮತ್ತು ರಸ್ತೆಯಲ್ಲಿ ನೃತ್ಯ ಮಾಡುತ್ತಿದ್ದವರು ಸಾವು, ನೋವು ಅನುಭವಿಸಿದರು. ಉತ್ಸವಕ್ಕೆ ಮೊದಲು ವಾರಾಂತ್ಯಗಳಲ್ಲಿ ಇಂತಹ ಮೆರವಣಿಗೆ ನಡೆಸುವುದು ಇಲ್ಲಿನ ಸಂಪ್ರದಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.