ADVERTISEMENT

ವಿದ್ಯುತ್ ಬರದ ವಿರುದ್ಧ ಆಕ್ರೋಶ, ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 19:30 IST
Last Updated 22 ಜೂನ್ 2012, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ವಿದ್ಯುತ್ ಸಮಸ್ಯೆಯಿಂದಾಗಿ ಕೆರಳಿದ ಪ್ರತಿಭಟನಾಕಾರರು ರಾವಲ್ಪಿಂಡಿ ನಗರದ ಅನೇಕ ಟ್ರಾಫಿಕ್ ಸಿಗ್ನಲ್‌ಗಳು, ಪಾದಚಾರಿ ರಸ್ತೆಗಳು, ಉದ್ಯಾನಗಳು, ಅಧಿಕಾರಿಗಳ ಕಾರುಗಳನ್ನು ಧ್ವಂಸಗೊಳಿಸಿದ್ದು, ಇದರಿಂದ ಪಾಕಿಸ್ತಾನ ಸರ್ಕಾರಕ್ಕೆ 85 ಲಕ್ಷ ರೂಪಾಯಿ ನಷ್ಟವಾಗಿದೆ.

ಹಾನಿಗೊಳಗಾದ 10 ಟ್ರಾಫಿಕ್ ಸಿಗ್ನಲ್‌ಗಳನ್ನು ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಿಂದ ತರಿಸಲಾಗಿತ್ತು. ಅವುಗಳ ಬೆಲೆ ಸರಾಸರಿ  4 ಲಕ್ಷ ರೂಪಾಯಿ ಎಂದು ರಾವಲ್ಪಿಂಡಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಚೌಧರಿ ನಾಸೀರ್ ಅಹ್ಮದ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪ್ರತಿಭಟನೆಯಿಂದ ತೋಟಗಾರಿಕಾ ಇಲಾಖೆಗೆ ರೂ 25 ಲಕ್ಷದಷ್ಟು ನಷ್ಟವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.