ಬೀಜಿಂಗ್ (ಎಎಫ್‌ಪಿ): ಟಿಬೆಟ್ ರಾಜಧಾನಿ ಲಾಸಾದಲ್ಲಿ ಶುಕ್ರವಾರ ಮಾಲಿನ್ಯ ತುಂಬಿದ ಮೋಡ ಕವಿದಿದ್ದ ಕಾರಣ ವಿಮಾನಗಳ ಹಾರಾಟ ಸ್ಥಗಿತವಾಗಿತ್ತು.
ವಿಶ್ವದ ಅತಿಎತ್ತರದ ಈ ನಗರವನ್ನು ಈಚೆಗಷ್ಟೇ ಚೀನಾ ಪರಿಸರ ಸಂರಕ್ಷಣಾ ಸಚಿವಾಲಯವು ಅತ್ಯಂತ ಉತ್ತಮ ಗುಣಮಟ್ಟದ ವಾಯು ಹೊಂದಿರುವ ನಗರ ಎಂದು ಗುರುತಿಸಿತ್ತು.
ಆದರೆ ಟಿಬೆಟ್ನ ಉತ್ತರ ಪ್ರಸ್ಥಭೂಮಿಯಲ್ಲಿ ದೂಳು ಎದ್ದ ಪರಿಣಾಮ ದಪ್ಪನೆಯ ಮೋಡದ ವಾತಾವರಣ ಉಂಟಾಗಿರುವುದಾಗಿ ಹಾಂಕಾಂಗ್ ಮೂಲದ ಇಫೆಂಗ್.ಕಾಮ್ ವೆಬ್ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.