
ಪ್ರಜಾವಾಣಿ ವಾರ್ತೆಲಂಡನ್ (ಪಿಟಿಐ): ಸ್ಥೂಲಕಾಯದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಎ-320 ಜೆಟ್‌ಗಳ ಆಸನಗಳ ಅಗಲ ಹೆಚ್ಚಿಸಲು ವಿಮಾನ ತಯಾರಿಕಾ ಕಂಪೆನಿ ಏರ್‌ಬಸ್~ ನಿರ್ಧರಿಸಿದೆ.
ಆದರೆ, ಮರುವಿನ್ಯಾಸದ ನಂತರವೂ ವಿಮಾನದ ಆಸನಗಳ ಸಂಖ್ಯೆ ಮುಂಚಿನಷ್ಟೇ ಇರಲಿದೆ. ಅಂದರೆ, ಸ್ಥೂಲದೇಹಿಗಳಿಗಾಗಿ ತೆಳ್ಳಗಿನ ಕಾಯದವರು ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ! ಈ ಮುಂಚೆ ವಿಮಾನದ ಪ್ರತಿ ಸಾಲಿನಲ್ಲಿ ತಲಾ 18 ಇಂಚು ಅಗಲದ ಮೂರು ಸೀಟುಗಳು ಇರುತ್ತಿದ್ದವು. ಈಗ ಸ್ಥೂಲದೇಹಿಗಳಿಗಾಗಿ ಒಂದು ಸೀಟಿನ ಅಗಲವನ್ನು 20 ಇಂಚಿಗೆ ಹೆಚ್ಚಿಸಿ, ಉಳಿದ ಎರಡು ಸೀಟುಗಳ ಅಗಲವನ್ನು ತಲಾ 17 ಇಂಚಿಗೆ ತಗ್ಗಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.