ADVERTISEMENT

ವಿಮಾನ ಕೆಳಗಿಳಿಸಿದ ಜೇನು ನೊಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 11:56 IST
Last Updated 8 ಜೂನ್ 2015, 11:56 IST
ವಿಮಾನ ಕೆಳಗಿಳಿಸಿದ ಜೇನು ನೊಣ
ವಿಮಾನ ಕೆಳಗಿಳಿಸಿದ ಜೇನು ನೊಣ   

ಲಂಡನ್‌(ಪಿಟಿಐ): ವಿಮಾನವೊಂದರಲ್ಲಿ  ಅನಿರೀಕ್ಷಿತವಾಗಿ ಜೇನುನೊಣ ಕಾಣಿಸಿಕೊಂಡ ಕಾರಣ ವಿಮಾನವನ್ನು ತುರ್ತುಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

ವಿಮಾನ ಸೌತ್ಯಾಮ್‌ಟೌನ್‌ನಿಂದ ಡುಬ್ಲಿನ್‌ಗೆ ತೆರಳುತ್ತಿತ್ತು. ವಿಮಾನದಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ  ವೇಳೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಪೈಲೆಟ್‌ ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಮತ್ತೆ ನಿಲ್ದಾಣಕ್ಕೆ ವಾಪಾಸು ಬಂದು  ವಿಮಾನವನ್ನು  ತುರ್ತು ಭೂಸ್ಪರ್ಶ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಗಾಳಿ ಕೊಳವೆಯಲ್ಲಿ  ಜೇನುನೊಣ ಸೇರಿದ್ದರಿಂದ ಈ ವಿಮಾನವನ್ನು ಮತ್ತೆ ಭೂಸ್ಪರ್ಶ ಮಾಡಲಾಯಿತು. ಎಂಜಿನಿಯರ್‌ಗಳು ಜೇನು ನೋಣಗಳನ್ನು ಗಮನಿಸಿಲ್ಲವಾದ್ದರಿಂದ ಹೀಗಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.