ಬೀಜಿಂಗ್ (ಪಿಟಿಐ): ಚೀನಾದ ಹುನಾನ್ ಪ್ರಾಂತ್ಯದ ಝಾಂಗ್‌ಜಿಯಾಜಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದ ಮತ್ತು ಎತ್ತರದ ಗಾಜಿನ ಸೇತುವೆ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದೆ. ಈ ಸೇತುವೆಯು ವಿಶಿಷ್ಟ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಹತ್ತು ವಿಶ್ವ ದಾಖಲೆಗೆ ಪಾತ್ರವಾಗಿದೆ.
ಇದೇ ವಾರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ತೂಗು ಸೇತುವೆ ನೋಡಲು ಬಯಸುವವರು ಒಂದು ದಿನ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ತೂಗು ಸೇತುವೆ ಮತ್ತು ಗಾಜಿನ ಧಾರಣಾ ಸಾಮರ್ಥ್ಯ ಪರೀಕ್ಷಿಸಲು ಎರಡು ಟನ್ ಭಾರದ ಟ್ರಕ್ ಓಡಿಸಲಾಗಿತ್ತು.
ಹಾಲಿವುಡ್‌ನ ಹಿಟ್ ಸಿನಿಮಾ ‘ಅವತಾರ್’ ನೋಡಿದವರಿಗೆ, ಕಂಬದಾಕಾರದ ಪರ್ವತಾಕಾರದ ಚಿತ್ರಣ ನೆನಪಿರಬಹುದು. ಇದು ಝಾಂಗ್‌ಜಿಯಾಜಿಯಲ್ಲಿದೆ. ಝಾಂಗ್‌ಜಿಯಾಜಿದಲ್ಲಿರುವ ಸುಂದರ ಕಣಿವೆ ಪ್ರದೇಶಕ್ಕೆ 2015ರಲ್ಲಿ, 12 ಲಕ್ಷಕ್ಕೂ ಹೆಚ್ಚು ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗಳು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.