ಟೋಕಿಯೊ (ಪಿಟಿಐ): ವಿಶ್ವದ ಹಿರಿಯಜ್ಜ ಜಿರೊಮನ್ ಕಿಮುರ (116) ಬುಧವಾರ ಬೆಳಗಿನ ಜಾವ ಅಸುನೀಗಿದ್ದಾರೆ.
ಸ್ಥಳೀಯ ಕಾಲಮಾನ ಪ್ರಕಾರ ಬೆಳಿಗ್ಗೆ 2.08ಕ್ಕೆ ಕಿಟೊ ಪ್ರಾಂತ್ಯದಲ್ಲಿರುವ ಕ್ಯುಟಾಂಗೊ ನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಜಿರೊಮನ್ ಅವರನ್ನು ಮೇ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡರೂ ಕೆಲವು ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕಿಟೊ ಪ್ರಾಂತದಲ್ಲಿ 1897ರ ಏಪ್ರಿಲ್ 19ರಂದು ಜನಿಸಿದ್ದ ಅವರು 2011ರಲ್ಲಿ `ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ' ಎಂದು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು.
19ನೇ ಶತಮಾನದಲ್ಲಿ ಜನಿಸಿ ಜೀವಂತವಾಗಿದ್ದ ಏಕೈಕ ವ್ಯಕ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದರು. ಅಂಚೆ ಕಂಚೇರಿಯಲ್ಲಿ 45 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ 1962ರಲ್ಲಿ ನಿವೃತ್ತಿ ಹೊಂದಿದ್ದರು. ಕಿಮುರ ಅವರು ಏಳು ಮಕ್ಕಳು, 14 ಮೊಮ್ಮಕ್ಕಳು, 25 ಮರಿಮಕ್ಕಳು, 15 ಮಂದಿ ಮರಿ ಮಕ್ಕಳ ಮಕ್ಕಳನ್ನು ಕಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.