ADVERTISEMENT

ವಿಷಪೂರಿತ ಅಂಟು ಬಳಕೆ: 1000 ಕಾರ್ಖಾನೆ ಬಂದ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬೀಜಿಂಗ್(ಪಿಟಿಐ): ವಿಷಪೂರಿತ ಅಂಟು ಬಳಕೆಯಿಂದ ನಾಲ್ವರು ಕೆಲಸಗಾರರು ಮೃತಪಟ್ಟ ಹಿನ್ನೆಲೆಯಲ್ಲಿ ಗುವಾಂಗ್‌ಜೊವು ನಗರದಲ್ಲಿ ಚರ್ಮದ ವಸ್ತುಗಳನ್ನು ಉತ್ಪಾದಿಸುತ್ತಿದ್ದ ಒಂದು ಸಾವಿರ ಕಾರ್ಖಾನೆಗಳನ್ನು ಮುಚ್ಚಲಾಗಿದೆ.

ಈ ಅಂಟಿನ ನಂಜಿನಿಂದಾಗಿ ನಾಲ್ವರು ಕಾರ್ಮಿಕರು ಈಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಉದ್ದಿಮೆಗಳು ಆರೋಗ್ಯ ಹಾಗೂ ಕಾರ್ಮಿಕ ರಕ್ಷಣೆಗೆ ಸಂಬಂಧಿಸಿದ ನೀತಿ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂಬ ಅನುಮಾನದಿಂದ ವಿಶೇಷ ತನಿಖಾ ಪಡೆಯನ್ನು ಕೂಡ ಗುವಾಂಗ್‌ಜೊವು ಪ್ರದೇಶದ ಉತ್ಪಾದಕ ರಕ್ಷಣಾ ವಿಭಾಗವು ನೇಮಿಸಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಹೆಚ್ಚಿನ ಕಾರ್ಖಾನೆಗಳು ಪರವಾನಗಿ ಪಡೆದಿಲ್ಲ, ಇಲ್ಲವೇ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎನ್ನುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ ಎಂದು ಚೀನಾ ಡೈಲಿ ಪತ್ರಿಕೆ ವರದಿ ಮಾಡಿದೆ.

ಈ ಸಂಬಂಧದ ಕಾರ್ಯಾಚರಣೆಯ ಸಂದರ್ಭದಲ್ಲಿ 2,873 ಕಾರ್ಖಾನೆಗಳ ಪರೀಶೀಲನೆ ನಡೆಸಲಾಗಿತ್ತು.
 ಈ ಅಂಟು ಉತ್ಪಾದನೆ ಹಾಗೂ ಮಾರಾಟದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.