ADVERTISEMENT

ವೀಸಾ ವಿಳಂಬ: ಭಾರತೀಯರ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 13:25 IST
Last Updated 30 ಡಿಸೆಂಬರ್ 2010, 13:25 IST

ವಾಷಿಂಗ್ಟನ್, (ಪಿಟಿಐ): ಹೊಸ ಕಾನೂನುಗಳು ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ವೀಸಾ ನೀಡಿಕೆ ಕಾರ್ಯ ವಿಳಂಬವಾಗುತ್ತಿದೆ ಎಂದಿರುವ ಸಮುದಾಯ, ಅಮೆರಿಕದಲ್ಲಿನ ವಿವಿಧ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮುಂದೆ ಈ ತಿಂಗಳ ಆರಂಭದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿತ್ತಲ್ಲದೆ ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ‘ಪ್ರವಾಸಿ ಭಾರತೀಯ ದಿವಸ’ದ ಸಂದರ್ಭದಲ್ಲಿ ಭಾರತದ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸಲು ತೀರ್ಮಾನಿಸಿದೆ.

ಹ್ಯೂಸ್ಟನ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋದಂತಹ ಸ್ಥಳಗಳಲ್ಲಿ ವೀಸಾ ನೀಡಿಕೆ ನಾಲ್ಕು ವಾರಗಳಷ್ಟು ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ವೀಸಾ ನೀಡಿಕೆಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಕಠಿಣ ಕಾನೂನುಗಳು ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನಗಳೆದಂತೆ ಸಮಸ್ಯೆ ಜಟಿಲವಾಗುತ್ತಿದೆ ಎಂದು ಭಾರತೀಯ ಮೂಲದ ಜನರ ಜಾಗತಿಕ ಸಂಘಟನೆಯ ಅಧ್ಯಕ್ಷ ಇಂದರ್ ಸಿಂಗ್ ಅಭಿಪ್ರಾಯಪಟ್ಟರು. ‘ಜನ ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಮೂಲದ ರಮೇಶ್ ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.