
ಪ್ರಜಾವಾಣಿ ವಾರ್ತೆಕ್ವಾಲಾಲಂಪುರ, (ಪಿಟಿಐ): ಥಾಯ್ಲೆಂಡ್‌ನ ಪಟ್ಟಾಯ ನಗರದಲ್ಲಿ ಐವರು ಭಾರತೀಯ ಪ್ರವಾಸಿಗರನ್ನು ಅವರು ಗೊತ್ತು ಮಾಡಿಕೊಂಡಿದ್ದ ವೇಶ್ಯೆಯೊಬ್ಬಳು ಮತ್ತು ಬರಿಸಿ ದರೋಡೆ ಮಾಡಿದ ಘಟನೆ ನಡೆದಿದೆ.
ಐವರಲ್ಲಿ ನಾಲ್ವರು ಪಾನಮತ್ತರಾಗಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮನ್‌ದೀಪ್ ಸಿಂಗ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಲೋಟ ಮದ್ಯ ಹಾಗೂ ಬಳಸಿದ್ದ ಕಾಂಡೋಮ್ ಕೋಣೆಯಲ್ಲಿ ಸಿಕ್ಕಿದೆ. ಸಮುದ್ರ ತೀರದ ಪ್ರಸಿದ್ಧ ರೆಸಾರ್ಟ್‌ನಲ್ಲಿ ವೇಶ್ಯೆ ಈ ಪ್ರವಾಸಿಗರನ್ನು ಭೇಟಿ ಮಾಡಿದ್ದಳು. ಮತ್ತು ಬರಿಸುವ ಮದ್ಯ ನೀಡಿ ಅವರೆಲ್ಲರೂ ಪ್ರಜ್ಞೆ ಕಳೆದುಕೊಂಡ ಕೂಡಲೇ ಹಣದ ಚೀಲದೊಂದಿಗೆ ಪರಾರಿಯಾಗಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.