ADVERTISEMENT

ವೈಮಾನಿಕ ಪ್ರದರ್ಶನ ದುರಂತ: 3 ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ರೆನೊ (ಎಪಿ): ವಾರ್ಷಿಕ ವೈಮಾನಿಕ ಪ್ರದರ್ಶನದಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಕೆಯಾದ ವಿಮಾನವೊಂದು ಪೈಲಟ್ ನಿಯಂತ್ರಣ ಕಳೆದುಕೊಂಡ ಪರಿಣಾಮ ದುರಂತಕ್ಕೀಡಾಗಿ ಕನಿಷ್ಠ ಮೂವರು ಮೃತಪಟ್ಟು, 50 ಕ್ಕೂ ಹೆಚ್ಚು ಪ್ರೇಕ್ಷಕರು ಗಾಯಗೊಂಡಿರುವ ಘಟನೆ ಅಮೆರಿಕ ನೆವಾಡದ ರೆನೊದಲ್ಲಿ ಶನಿವಾರ ನಡೆದಿದೆ. 

 ಘಟನೆಯಲ್ಲಿ ಮೃತಪಟ್ಟವರಲ್ಲಿ 80 ವರ್ಷದ ಪೈಲಟ್ ಜಿಮ್ಮಿ ಲಿವಾರ್ಡ್ ಕೂಡ ಇದ್ದಾರೆ.  `ರಕ್ತಸಿಕ್ತ ಅವಯವಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದುದನ್ನು ನಾವು ಕಣ್ಣಾರೆ ಕಂಡೆವು. ಬದುಕುಳಿದ ವ್ಯಕ್ತಿಗಳ ಅವಯವಗಳೂ ತುಂಡಾಗಿ ಬಿದ್ದಿವೆ. ಘಟನಾ ಸ್ಥಳದಲ್ಲಿ ನೆತ್ತರ ಕೋಡಿ ಹರಿದಿತ್ತು~ ಎಂದು ಅಲಬಾಮಾದ ಮೌರೇನ್ ಹಿಗ್ಗೀಸ್ ಎಂಬುವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.