ADVERTISEMENT

ಶಸ್ತ್ರಾಸ್ತ್ರ ಆಮದು: ಭಾರತಕ್ಕೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 17:00 IST
Last Updated 14 ಮಾರ್ಚ್ 2011, 17:00 IST

ಲಂಡನ್ (ಪಿಟಿಐ):  ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವಲ್ಲಿ ಚೀನಾ ದೇಶವನ್ನು ಬದಿಗೊತ್ತಿ ಭಾರತ ವಿಶ್ವದ ಅತ್ಯಂತ ದೊಡ್ಡದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ದಕ್ಷಿಣ ಕೋರಿಯಾ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ 3ನೇ ಸ್ಥಾನದಲ್ಲಿದೆ ಎಂದು ಸ್ವೀಡನ್‌ನ ಚಿಂತಕರ ಚಾವಡಿ ವರದಿ ತಿಳಿಸಿದೆ.

‘ಭಾರತ ವಿಶ್ವದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದು ದೇಶ’ ಎಂದು ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ  ಪ್ರಕಟಿಸಿರುವ ನೂತನ ವರದಿ ತಿಳಿಸಿದೆ.

 ‘2006-10 ರಲ್ಲಿ ಭಾರತ ಶೇ. 9 ರಷ್ಟು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವರ್ಗಾವಣೆ ನಡೆಸಿದೆ. ಇದರಲ್ಲಿ ರಷ್ಯದಿಂದ ಕೊಂಡ ಶಸ್ತ್ರಾಸ್ತ್ರಗಳ ಪ್ರಮಾಣ ಶೇ.82’ ಎಂದು ವರದಿ ತಿಳಿಸಿದೆ. 2006-10ರಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು  ಆಮದು ಮಾಡಿಕೊಂಡ 4 ಅತ್ಯಂತ ದೊಡ್ಡ ದೇಶಗಳು ಏಷ್ಯಾದಲ್ಲಿದೆ ಎಂದು ವರದಿ ತಿಳಿಸಿದೆ.  1992ರಲ್ಲೂ ಭಾರತ ಮುಂಚೂಣಿಯಲ್ಲಿತ್ತು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.