ADVERTISEMENT

ಶ್ರೀಲಂಕಾ ವಿಮಾನ ನಿಲ್ದಾಣ ಭಾರತಕ್ಕೆ ಹಸ್ತಾಂತರ: ವಿರೋಧ

ಪಿಟಿಐ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಮತ್ತಲ ಮಹಿಂದ ರಾಜಪಕ್ಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಎಂಆರ್‌ಐಎ) ಭಾರತಕ್ಕೆ ಹಸ್ತಾಂತರಿಸುವ ಶ್ರೀಲಂಕಾ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿರೋಧಪಕ್ಷಗಳ ನಾಯಕರು, ಕಾರ್ಯಕರ್ತರು ಇಲ್ಲಿನ ಹಂಬನ್‌ತೊಟದಲ್ಲಿರುವ ಭಾರತ ಕನ್ಸಲೇಟ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಪಿರಂಗಿಗಳನ್ನು ಬಳಸಿದರು. 26 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ

ಪ್ರತಿಭಟನಾಕಾರರ ಜತೆ ನಡೆದ ಘರ್ಷಣೆಯಲ್ಲಿ ನಾಲ್ವರು ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿವೆ.

ADVERTISEMENT

‘ಮಹಿಂದ ರಾಜಪಕ್ಸ ಅವರು ತಮ್ಮ ಅವಧಿಯಲ್ಲಿ ಚೀನಾದಿಂದ ನೆರವು ಪಡೆದು ಬೃಹತ್‌ ವಿಮಾನ ನಿಲ್ದಾಣವನ್ನು ನಿರ್ಮಿಸಿದ್ದಾರೆ. ನಮ್ಮ ದೇಶದ ಸ್ವತ್ತನ್ನು ಯಾವುದೇ ಕಾರಣಕ್ಕೂ ವಿದೇಶಿಯರಿಗೆ ಹಸ್ತಾಂತರಿಸಲು ಬಿಡುವುದಿಲ್ಲ’ ಎಂದು ವಿರೋಧಪಕ್ಷದ ಸಂಸದ ಡಿ.ವಿ.ಚನಕ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.