ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ವೆನೆಜುವೆಲಾ ರಾಜಾಶ್ರಯ ಒಪ್ಪಿದ ಸ್ನೋಡೆನ್?
ಮಾಸ್ಕೊ/ ಕ್ಯಾರಕಾಸ್ (ಎಪಿ):
ಅಮೆರಿಕ ಗುಪ್ತದಳದ ಅಂತರ್ಜಾಲ ಬೇಹುಗಾರಿಕೆಯನ್ನು ಬಯಲುಗೊಳಿಸಿದ ಎಡ್ವರ್ಡ್ ಸ್ನೋಡೆನ್ ವೆನೆಜುವೆಲಾದ ರಾಜಾಶ್ರಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ರಷ್ಯಾ, ನಂತರ ತನ್ನ ಹೇಳಿಕೆಯನ್ನು ವಾಪಸ್ ಪಡೆದಿದೆ.

ರಷ್ಯಾ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಮುಖ್ಯಸ್ಥ ಅಲೆಕ್ಸಿ ಪುಶ್‌ಕೊವ್ ಅವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ದಾಖಲಿಸಿ, `ವೆನೆಜುವೆಲಾ ರಾಜಾಶ್ರಯವನ್ನು ಸ್ನೋಡೆನ್ ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದ್ದರು.

ಬಾಲಕನ ಪತ್ರಕ್ಕೆ `ನಾಸಾ' ಒತ್ತಾಸೆ
ವಾಷಿಂಗ್ಟನ್ (ಪಿಟಿಐ):
ವಿಜ್ಞಾನ ಮತ್ತು ಗಣಿತದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಏಳು ವರ್ಷದ ಬಾಲಕನೊಬ್ಬ `ಗಗನಯಾತ್ರಿ' ಆಗುವುದು ಹೇಗೆ ಎಂದು ಕೇಳಿ ಬರೆದ ಪತ್ರಕ್ಕೆ, ನಾಸಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿರುವ ಘಟನೆ ನಡೆದಿದೆ.

ಬ್ರಿಟನ್‌ನ ಡೆಕ್ಸ್‌ಟರ್ ಎಂಬ ಬಾಲಕ, `ಪ್ರಿಯ, ನಾಸಾ, ನೀನು ಮಂಗಳಗ್ರಹಕ್ಕೆ ಮನುಷ್ಯರನ್ನು ಕಳುಹಿಸುತ್ತಿರುವೆ ಎಂದು ನಾನು ಕೇಳಿದ್ದೇನೆ. ನನಗೂ ಅಲ್ಲಿಗೆ ಹೋಗಲು ಆಸೆ ಇದೆ. ಆದರೆ ನನಗಿನ್ನು ಏಳು ವರ್ಷ' ಎಂದು ಆನ್‌ಲೈನ್ ಮೂಲಕ ಡೆಕ್ಸ್‌ಟರ್ ನಾಸಾಗೆ ಪತ್ರ ಬರೆದಿದ್ದ.

ಡೆಕ್ಸ್‌ಟರ್ ಪತ್ರವನ್ನು ಉಡಾಫೆ ಮಾಡದೇ ಬಾಹ್ಯಾಕಾಶ ಕುರಿತು ಆತ ಹೊಂದಿರುವ ಆಸಕ್ತಿ ಮತ್ತು ಕುತೂಹಲಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾಸಾ, ಬಾಲಕನಿಗೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಚಿತ್ರಗಳು ಮತು ಸ್ಟಿಕ್ಕರ್‌ಗಳನ್ನು ಕಳುಹಿಸಿದೆ.  ಹೆಚ್ಚಿನ ಮಾಹಿತಿಗಾಗಿ ಬಾಹ್ಯಾಕಾಶ ಶಿಬಿರ ಸೇರುವಂತೆ ಉತ್ತೇಜಿಸಿದೆ.

ಪಾಕ್ ಬಣ್ಣ ಮತ್ತೊಮ್ಮೆ ಬಯಲು
ಇಸ್ಲಾಮಾಬಾದ್ (ಪಿಟಿಐ)
: ಅಲ್ ಖೈದಾ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ 2002ರಿಂದಲೇ ಪಾಕಿಸ್ತಾನದಲ್ಲಿ ನೆಲೆಸಿದ್ದ. ಆತ ಅಲ್ಲಿ ನೆಲೆಯೂರಲು ರಾಷ್ಟ್ರದ ಸೇನೆ ಮತ್ತು ಬೇಹುಗಾರಿಕಾ ದಳವಾದ ಐಎಸ್‌ಐ ವೈಫಲ್ಯವೇ ಕಾರಣ ಎಂದು ಅಬೋಟಾಬಾದ್ ಆಯೋಗದ ತನಿಖಾ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.