ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಅತ್ಯಂತ ಶೀತಲ ತಾಣ ಪತ್ತೆ
ವಾಷಿಂಗ್ಟನ್‌ (ಪಿಟಿಐ):
ಪೂರ್ವ ಅಂಟಾರ್ಕ್ಟಿಕಾದ ನಿರ್ಜನ ಪ್ರದೇಶ­ವೊಂದು ಹೊಸ ದಾಖಲೆ ಸೃಷ್ಟಿಸಿದ್ದು, ಜಗತ್ತಿನ ಅತಿ ಶೀತಲ ಪ್ರದೇಶ­ವೆಂದು ಗುರುತಿಸಿಕೊಂಡಿದೆ. ಅಲ್ಲಿನ ಉಷ್ಣಾಂಶ ಮೈನಸ್‌ -93.2 ಸೆಲ್ಸಿಯಸ್‌ನಷ್ಟು ದಾಖ­ಲಾ­­ಗಿದೆ ಎಂದು ನಾಸಾ ವಿಜ್ಞಾನಿ­ಗಳು ತಿಳಿಸಿದ್ದಾರೆ.

ಚಳಿಗಾಲದ ರಾತ್ರಿಗಳಲ್ಲಿ ಪೂರ್ವ ಅಂಟಾರ್ಕ್ಟಿ­ಕಾದ ಪ್ರಸ್ಥಭೂಮಿಯ ಅನೇಕ ಪರ್ವತ­ಶ್ರೇಣಿಯ ಕಂದರಗಳಲ್ಲಿ ಅತಿಕಡಿಮೆ ಉಷ್ಣಾಂಶ ಅಂದರೆ ಮೈನಸ್‌ 92 ಡಿಗ್ರಿ ಸೆಲ್ಸಿಯಸ್‌ನಷ್ಟು  ಇರುತ್ತದೆ. ಆದರೆ 2010 ಆಗಸ್ಟ್‌ 10ರಂದು ಮೈನಸ್‌ 93.2 ಡಿಗ್ರಿಯಷ್ಟು ಉಷ್ಣಾಂಶ ದಾಖಲಾ­ಗಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾ. ಚೌಧರಿ ಇಂದು ನಿವೃತ್ತಿ
ಇಸ್ಲಾಮಾಬಾದ್‌ (ಪಿಟಿಐ):
ರಾಜಕಾರಣಿಗಳು ಮತ್ತು ನೌಕರಶಾಹಿ­ಯಲ್ಲಿ ನಡುಕ ಹುಟ್ಟಿಸಿದ್ದ  ಪಾಕಿ­ಸ್ತಾನದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಇಫ್ತಿಕಾರ್‌ ಚೌಧರಿ ಬುಧವಾರ ನಿವೃತ್ತರಾಗಲಿದ್ದಾರೆ.

ಸರ್ಕಾರ ಮತ್ತು ಸೇನೆಯನ್ನು ಎದುರು ಹಾಕಿಕೊಂಡು ಅನೇಕ ಮಹತ್ವದ ತೀರ್ಪುಗಳನ್ನು ನೀಡಿ ನ್ಯಾಯಾಂಗದ ಘನತೆ ಎತ್ತಿ ಹಿಡಿದಿದ್ದಾರೆ. ನ್ಯಾಯಾಂಗದ ತೀರ್ಪನ್ನು ಜಾರಿಗೊಳಿಸಲು ಹಿಂದೇಟು ಹಾಕಿದ ಅಂದಿನ ಪ್ರಧಾನಿ ಗಿಲಾನಿ ಅವರಿಗೆ ಹುದ್ದೆ ತ್ಯಜಿಸುವಂತೆ ಆದೇಶಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದರು.

ಚೌಧರಿ ಅವರನ್ನು ರಾಜಕಾರಣಿಗಳು, ನೌಕರ­ಶಾಹಿ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು. ಆದರೆ, ಸಾಮಾನ್ಯ ಜನರಿಗೆ ಅಚ್ಚುಮೆಚ್ಚಿ­ನವ­ರಾಗಿದ್ದರು.

ಎಲ್‌ಒಸಿ ಪರಿಶೀಲಿಸಿದ ಷರೀಫ್‌
ಇಸ್ಲಾಮಾಬಾದ್‌(ಪಿಟಿಐ):
ಪಾಕಿಸ್ತಾನದ ಸೇನಾ ಪಡೆಯ ನೂತನ ಮುಖ್ಥಸ್ಥರಾದ ರಶೀಲ್‌ ಷರೀಫ್‌ ಅವರು ಮಂಗಳವಾರ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆ ಪ್ರದೇಶ­ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೊಬೆಲ್‌ ಶಾಂತಿ ಪ್ರಶಸ್ತಿ ಪ್ರದಾನ
ಒಸ್ಲೊ (ಐಎಎನ್‌ಎಸ್‌):
ರಾಸಾಯನಿಕ ಅಸ್ತ್ರ ನಿಷೇಧ ಸಂಸ್ಥೆ (ಒಪಿಸಿಡಬ್ಲ್ಯು) ಗೆ ೨೦೧೩ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.