ADVERTISEMENT

ಸಮುದಾಯ ಸೇವೆಯ ಶಿಕ್ಷೆ!

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ನ್ಯೂಯಾರ್ಕ್ (ಪಿಟಿಐ): ನ್ಯಾಯಾಲಯಗಳು ಅಪರಾಧಿಗಳಿಗೆ ಜೈಲು ಶಿಕ್ಷೆ ಅಥವಾ ಕಠಿಣ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ನ್ಯಾಯಾಲಯ ಭಾರತೀಯ ಮೂಲದ ಪತ್ನಿ ಪೀಡಕನಿಗೆ ಜೈಲು ಶಿಕ್ಷೆಯ ಬದಲಾಗಿ `ಸಮುದಾಯ ಸೇವೆ~ಯ ಶಿಕ್ಷೆ ನೀಡುವ ಮೂಲಕ ಗಮನ ಸೆಳೆದಿದೆ.

ಪತ್ನಿಯನ್ನು ಮನೆ ಕೆಲಸದವಳಂತೆ ನಡೆಸಿಕೊಂಡ ಮತ್ತು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 34 ವರ್ಷದ ವಿಶಾಲ್ ಜಗೋಟಾನಿಗೆ ಸ್ಥಳೀಯ ನ್ಯಾಯಾಲಯ 220 ಗಂಟೆಗಳ ಕಾಲ ಸಮುದಾಯ ಸೇವೆ ಮತ್ತು ಮೂರು ವರ್ಷಗಳ ಪರೀಕ್ಷಣಾ ಅವಧಿಯಶಿಕ್ಷೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.