ADVERTISEMENT

ಸಿಟಿ ಗ್ರೂಪ್: ಪಂಡಿತ್‌ಗೆ ರೂ 35 ಕೋಟಿ ಪಾವತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ನ್ಯೂಯಾರ್ಕ್ (ಪಿಟಿಐ): ಅಮೆರಿಕ ಮೂಲದ ಸಿಟಿ ಗ್ರೂಪ್ ತನ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಮೂಲದ ವಿಕ್ರಂ ಪಂಡಿತ್ ಅವರಿಗೆ 66 ಲಕ್ಷ ಡಾಲರ್ (35.56 ಕೋಟಿ)  ಪಾವತಿಸಲಿದೆ.

ವಿಕ್ರಂ ಪಂಡಿತ್ ಕಳೆದ ತಿಂಗಳು ತಮ್ಮ ಹುದ್ದೆಗೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು.  2012ನೇ ಸಾಲಿನ ಪ್ರೋತ್ಸಾಹಕ ರೂಪದಲ್ಲಿ ಅವರಿಗೆ ಈ ಮೊತ್ತ ಪಾವತಿಸಲು ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದೆ ಎಂದು ಸಿಟಿ ಗ್ರೂಪ್, ಅಮೆರಿಕ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ  ತಿಳಿಸಿದೆ.

`ಪಂಡಿತ್ ಜತೆಗೆ, ಮಾಜಿ ಅಧ್ಯಕ್ಷ  ಜಾನ್ ಹವೆನ್ಸ್ ಅವರಿಗೆ 68 ಲಕ್ಷ ಡಾಲರ್ (ರೂ 36.66 ಕೋಟಿ) ಪ್ರೋತ್ಸಾಹಕ ಧನ ಪಾವತಿಸುತ್ತಿದ್ದೇವೆ. ಇವರಿಬ್ಬರು ತಮ್ಮ  5 ವರ್ಷಗಳ ಸೇವಾ ಅವಧಿಯಲ್ಲಿ ಸಂಸ್ಥೆಗೆ ಮಹತ್ತರ ಕೊಡುಗೆ ನೀಡಿದ್ದಾರೆ~ ಎಂದು ಸಿಟಿಗ್ರೂಪ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೈಕಲ್‌ನಿಯಾಲ್ ಭಾನುವಾರ ಇಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.