ADVERTISEMENT

ಸಿನಿಮಾಗಳ ಲೈಂಗಿಕ ದೃಶ್ಯ ವೀಕ್ಷಣೆ: ಎಳೆಯರಲ್ಲಿ ಹೆಚ್ಚುವ ಲಂಪಟತನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಲಂಡನ್ (ಪಿಟಿಐ): ಜನಪ್ರಿಯ ಸಿನಿಮಾಗಳಲ್ಲಿ ಲೈಂಗಿಕತೆ ಪ್ರಚೋದಿಸುವ ದೃಶ್ಯಗಳನ್ನು ವೀಕ್ಷಿಸುವ ಎಳೆಯರು ಯೌವನಾವಸ್ಥೆಯಲ್ಲಿ  ಹೆಚ್ಚು ಸ್ವಚ್ಛಂದ ಪ್ರವೃತ್ತಿಗೆ ಇಳಿಯುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಹಿಟ್ ಆಗಿರುವ 700 ಹಾಲಿವುಡ್ ಸಿನಿಮಾಗಳ ವೀಕ್ಷಣೆ ಆಧರಿಸಿ ಈ ಅಧ್ಯಯನ ಸಿದ್ಧಪಡಿಸಲಾಗಿದೆ. ಪರದೆಯ ಮೇಲೆ ತೋರಿಸಲಾಗುವ ಕಾಮಪ್ರಚೋದಕ  ದೃಶ್ಯಗಳು ಎಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕಾಂಡೊಮ್ ಇಲ್ಲದೆಯೆ ಲೈಂಗಿಕ ಸಂಪರ್ಕ ಸಾಧಿಸಲು ಇಂತಹ ಸಿನಿಮಾಗಳು ಪ್ರಚೋದನೆ ನೀಡಿವೆ ಎಂದು ಅಧ್ಯಯನ ಹೇಳಿದೆ.

`ಪ್ರೀತಿಸುವ ದೃಶ್ಯಗಳು ಎಳೆಯರ ವ್ಯಕ್ತಿತ್ವದ ಮೇಲೆ ಗಾಢವಾಗಿ ಪರಿಣಾಮ ಬೀರದೇ ಇರಲಾರವು. ಹಾಗಾಗಿ ಈ ಕುರಿತು ಪಾಲಕರು ಅಗತ್ಯ ಕ್ರಮ ಕೈಗೊಳ್ಳಬೇಕು~   ಎಂದು ನ್ಯೂ ಹ್ಯಾಂಪ್‌ಸ್ಫೈರ್‌ನ ಡರ್ಟ್‌ಮೌತ್ ಕಾಲೇಜಿನ ಸಂಶೋಧಕರು ಎಚ್ಚರಿಸಿದ್ದಾರೆ ಎಂದು `ಡೈಲಿ ಟೆಲಿಗ್ರಾಫ್~ ವರದಿ ಮಾಡಿದೆ.  ಮನೋವಿಜ್ಞಾನ ವಿಭಾಗದ ಈ ತಂಡ 12ರಿಂದ 14ವರ್ಷದೊಳಗಿನ 1228 ಮಕ್ಕಳ ಲೈಂಗಿಕ ವರ್ತನೆಯನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ಸಿದ್ಧಪಡಿಸಿದೆ.

ADVERTISEMENT

1998ರಿಂದ 2004ರ ಅವಧಿಯೊಳಗೆ ಬಿಡುಗಡೆಯಾದ 684 ಜನಪ್ರಿಯ ಹಾಲಿವುಡ್ ಸಿನಿಮಾಗಳಲ್ಲಿ ಲೈಂಗಿಕತೆ ದೃಶ್ಯಗಳಿವೆ. 1950ರಿಂದ 2006ರ ಅವಧಿಯೊಳಗಿನ ಸಿನಿಮಾಗಳ ಪೈಕಿ ಲೈಂಗಿಕತೆ ಪ್ರಚೋದಿಸುವ ಸಿನಿಮಾಗಳ ಪ್ರಮಾಣ ಶೇ 84 ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.