ಡಮಾಸ್ಕಸ್ (ಐಎಎನ್‌ಎಸ್): ಭದ್ರತಾ ಕೇಂದ್ರ ಕಚೇರಿಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 27 ನಾಗರಿಕರು ಹತರಾಗಿ, 100ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಶನಿವಾರ ನಡೆದಿರುವುದಾಗಿ ಸರ್ಕಾರಿ ಟಿವಿ ವರದಿ ಮಾಡಿದೆ.
ಮೊದಲ ಸ್ಫೋಟವು ಅಪರಾಧ ಭದ್ರತಾ ಇಲಾಖೆ ಗುರಿಯಾಗಿರಿಸಿಕೊಂಡು ಅಲ್-ಜಮರೀಕ್ ಬಳಿ ಹಾಗೂ ಎರಡನೇಯ ಸ್ಫೋಟವು ವಾಯುಯಾನ ಗುಪ್ತಚರ ನಿರ್ದೇಶನಾಲಯದ ನೆರೆಯ ಅಲ್-ಖ್ವಾಸಾದೊಂದಿಗೆ ಬಾಗ್ದಾದ್ ರಸ್ತೆ ಸಂಪರ್ಕಿಸುವ ಅಲ್-ತೆಹ್ರಿರ್ ಚೌಕ್‌ನಲ್ಲಿ ನಡೆಸಲಾಗಿದೆ.
ಅಲ್- ತೆಹ್ರಿರ್ ಚೌಕ್ ಬಳಿ ನಡೆದ ಎರಡನೇಯ ಸ್ಫೋಟದ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿರುವ ಕಟ್ಟಡಗಳು ಹೊತ್ತಿ ಉರಿಯುತ್ತಿದ್ದ ನೇರ ದೃಶ್ಯಾವಳಿಗಳನ್ನು ಟಿವಿ ಬಿತ್ತರಿಸಿತು.
ಸ್ಫೋಟದಲ್ಲಿ ವಾಯುಯಾನ ಗುಪ್ತಚರ ನಿರ್ದೇಶನಾಲಯ ಬಳಿ ನಿಲ್ಲಿಸಿದ್ದ ಕಾರುಗಳು ಬೆಂಕಿಗಾಹುತಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.