ADVERTISEMENT

ಸಿರಿಯಾ ಬಿಕ್ಕಟ್ಟು

ರಾಜತಾಂತ್ರಿಕ ಮಾರ್ಗದತ್ತ ಬರಾಕ್ ಒಬಾಮ ಒಲವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌ (ಪಿಟಿಐ): ರಾಸಾಯನಿಕ ಅಸ್ತ್ರಗಳ ಪ್ರಯೋಗಕ್ಕಾಗಿ ಸಿರಿಯಾ ವಿರುದ್ಧ ದಾಳಿ ನಡೆಸುವುದನು್ನ ತಡೆ ಯಲು ಆ ದೇಶದ ಜತೆ  ರಾಜತಾಂತ್ರಿಕ ಮಾರ್ಗಗಳನ್ನು ತೆರೆದಿಡಲು ತಾವು ಆಸಕ್ತಿ ತೋರಿದ್ದಾಗಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಸಮರಸನ್ನದ್ಧ ಅಮೆರಿಕನ್ನರಿಗೆ ತಿಳಿಸಿದ್ದಾರೆ. ಆದರೆ ಈ ಮಾರ್ಗದ ಮೂಲಕ ನಡೆಯಬಹುದಾದ ಮಾತುಕತೆಗಳೇನಾದರೂ ವಿಫಲವಾದಲ್ಲಿ ದಾಳಿಗೆ ಸನ್ನದ್ಧರಾಗಿರು ವಂತೆಯೂ ಅವರು ಸೇನೆಗೆ ಸೂಚನೆ ನೀಡಿದ್ದಾರೆ.

ಶ್ವೇತಭವನದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಒಬಾಮ, ಸಿರಿಯಾ ತನ್ನಲ್ಲಿರುವ ರಾಸಾಯನಿಕ ಅಸ್ತ್ರಗಳ ದಾಸಾ್ತನನು್ನ ಅಂತರ ರಾಷ್ಟ್ರೀಯ ನಿಯಂತ್ರಣಕೆ್ಕ ಒಳಪಡಿಸ ಬೇಕು ಎನು್ನವ ರಷ್ಯಾ ಸಲಹೆ
ಉತ್ತಮ ಬೆಳವಣಿಗೆ. ಈ ಕುರಿತು ತಾವು ಆ ದೇಶದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ವಿಶ್ವಸಂಸೆ್ಥಯ ಸಮ್ಮತಿ ಇಲ್ಲದೆ ಸಿರಿಯಾ ಮೇಲೆ ಯಾವುದೇ ದಾಳಿ ನಡೆಸಕೂಡದು ಎಂದು ಪ್ರತಿಪಾದಿಸುತಿ್ತ ರುವ ರಷ್ಯಾ ಅಧ್ಯಕ್ಷರ ಜತೆಯೂ ತಾವು ಸಿರಿಯಾ ವಿಷಯ ಚಚಿರ್ಸುವುದಾಗಿ ಒಬಾಮ ತಮ್ಮ 16 ನಿಮಿಷಗಳ ಭಾಷಣದಲಿ್ಲ ತಿಳಿಸಿದರು.

ಸಿರಿಯಾ ಮೇಲೆ ದಾಳಿ ನಡೆಸಲು ದೇಶದ ಜನ ಹಾಗೂ ಕಾಂಗೆ್ರಸ್‌ನಿಂದ ಸಮ್ಮತಿ ಪಡೆಯುವ ದಿಸೆಯಲಿ್ಲ ಒಬಾಮ ಈ ಭಾಷಣ ಮಾಡಿದರು ಎನ್ನಲಾಗಿದೆ.

‘ಸಿರಿಯಾ ಅಧ್ಯಕ್ಷ ಬಷರ್‌ ಅಸಾದ್‌ ಮೇಲೆ ಒತ್ತಡ ತರುವ ಯತ್ನದ ಭಾಗ ವಾಗಿ ರಾಜತಾಂತಿ್ರಕ ಮಾಗೋರ್ಪಾಯ ಗಳನು್ನ ಕಂಡುಕೊಳ್ಳ ಲಾಗುತಿ್ತದೆ. ಒಂದು ವೇಳೆ ಇಂತಹ ಮಾತುಕತೆ ಗಳೇನಾದರೂ ವಿಫಲವಾದಲಿ್ಲ ಆ ದೇಶದ ಮೇಲೆ ದಾಳಿಗೆ ಸನ್ನದ್ಧರಾಗಿರುವಂತೆ ನಮ್ಮ ಸೇನೆಗೆ ಆದೇಶ ನೀಡಿರುವೆ’ ಎಂದು ಒಬಾಮ ಹೇಳಿದರು.

ಸಾಕ್ಷ್ಯ ಸಲ್ಲಿಸಿದ ರಷ್ಯಾ (ಮಾಸ್ಕೊ ವರದಿ): ಸಿರಿಯಾದಲ್ಲಿ ಇತ್ತೀಚೆಗೆ  ಉಗ್ರರು ರಾಸಾಯನಿಕ ಅಸ್ತ್ರ ಬಳಸಿ ನಡೆಸಿದ ಮಾರಣಹೋಮಕ್ಕೆ ಸಂಬಂಧಿ ಸಿದ ಸಾಕ್ಷ್ಯಗಳನ್ನು ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದೆ.

ಬಷರ್‌ ಆಡಳಿತದಿಂದ ಹತ್ಯಾಕಾಂಡ (ಜಿನಿವಾ ವರದಿ): ಕಳೆದ ಒಂದೂವರೆ ವರ್ಷದಲಿ್ಲ ಸಿರಿಯಾದಲಿ್ಲ ನಡೆದ ಒಟು್ಟ 9 ನರಮೇಧಗಳಲಿ್ಲ ಎಂಟನು್ನ ಅಧ್ಯಕ್ಷ ಬಷರ್‌ ಅಸಾದ್‌ ಆಡಳಿತ ಹಾಗೂ ಅವರ ಬೆಂಬಲಿಗರು ನಡೆಸಿದ್ದರೆ ಇನೊ್ನಂದನು್ನ ಬಂಡುಕೋರರು ನಡೆಸಿ ದಾ್ದರೆ ಎಂದು ವಿಶ್ವಸಂಸೆ್ಥ ನಡೆಸಿದ ತನಿಖಾ ವರದಿಯಲಿ್ಲ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.