ಹ್ಯೂಸ್ಟನ್ (ಪಿಟಿಐ) : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ ಮತ್ತು ಉಳಿದ ಇಬ್ಬರು ಗಗನಯಾತ್ರಿಗಳು ನಾಲ್ಕು ತಿಂಗಳ ಬಳಿಕ ಭಾನುವಾರ ಭೂಮಿಗೆ ಮರಳುವ ಸಾಧ್ಯತೆ ಇದೆ.
ಶನಿವಾರ ಸುನಿತಾ ವಿಲಿಯಮ್ಸ ಔಪಚಾರಿಕವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜವಾಬ್ದಾರಿಯನ್ನು ನಾಸಾದ ಗಗನಯಾತ್ರಿ ಕೆವಿನ್ ಫೋರ್ಡ್ ಅವರಿಗೆ ಒಪ್ಪಿಸಿದರು.
ಭಾರತ ಮೂಲದ ಸುನಿತಾ ವಿಲಿಯಮ್ಸ ಉಳಿದ ಇಬ್ಬರು ಗಗನಯಾತ್ರಿಗಳಾದ ಜಪಾನ್ ದೇಶದ ಅಖಿ ಹೋಶಿದೆ ಮತ್ತು ರಷ್ಯಾ ದೇಶದ ಯೂರಿ ಮಲೆಂಚೆಕೊ ಅವರೊಂದಿಗೆ ಭಾನುವಾರ ಭೂಮಿಗೆ ಮರಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.