ADVERTISEMENT

ಸೂರ್ಯನತ್ತ ನಾಸಾ ನೌಕೆ: ಹೆಸರು ನೋಂದಣಿಗೆ ಅವಕಾಶ

ಪಿಟಿಐ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಪಾರ್ಕರ್‌ ಸೌರಶೋಧನಾ ನೌಕೆ
ಪಾರ್ಕರ್‌ ಸೌರಶೋಧನಾ ನೌಕೆ   

ವಾಷಿಂಗ್ಟನ್‌: ನಾಸಾ ಇದೇ ಮೊದಲ ಬಾರಿಗೆ ಸೂರ್ಯನತ್ತ  ನೌಕೆಯೊಂದನ್ನು ಕಳುಹಿಸುತ್ತಿದೆ. ಸಾರ್ವಜನಿಕರ‌ ಹೆಸರನ್ನು ನಮೂದಿಸುವ ಮೈಕ್ರೋಚಿಪ್‌ನ್ನು ಈ ನೌಕೆ ಕೊಂಡೊಯ್ಯಲಿದೆ.

‘ಏಪ್ರಿಲ್‌ 27ರ ಒಳಗಾಗಿ ಆನ್‌ಲೈನ್‌ ಮೂಲಕ ಜನರು ತಮ್ಮ ಹೆಸರನ್ನು ಕಳುಹಿಸಬಹುದು’ ಎಂದು ನಾಸಾ ತಿಳಿಸಿದೆ.

‘ಸೂರ್ಯನ ವಾತಾವರಣದಲ್ಲಿನ ಗರಿಷ್ಠ ತಾಪಮಾನ ಹಾಗೂ ವಿಕಿರಣದ ಸ್ಥಿತಿಗತಿ ಅರಿಯಲು ‘ಪಾರ್ಕರ್‌ ಸೌರಶೋಧ ನೌಕೆ’ಯನ್ನು ಕಳುಹಿಸಲಾಗುತ್ತಿದೆ’ ಎಂದು ನಾಸಾ ತಿಳಿಸಿದೆ. 60 ವರ್ಷಗಳ ಹಿಂದೆ ಸೌರಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಶೋಧನೌಕೆಗೆ ಅವರ ಹೆಸರನ್ನೇ ಇಡಲಾಗಿದೆ.

ADVERTISEMENT

‘ಭೂಮಿಯ ಮೇಲಿನ ಬೆಳಕು ಹಾಗೂ ಉಷ್ಣತೆಯ ಮೂಲ ಸೂರ್ಯ. ಈ ಗ್ರಹದ ಬಗ್ಗೆ ಹೆಚ್ಚು ತಿಳಿಯುವ ಮೂಲಕ ಭೂಮಿಯಲ್ಲಿ ಜೀವಿಗಳ ಅಭಿವೃದ್ಧಿ ಹೇಗಾಯಿತು ಎಂಬುದನ್ನು ಅರಿಯಬಹುದಾಗಿದೆ’ ಎಂದು ನಾಸಾದ ವಿಜ್ಞಾನ ಶೋಧನಾ ವಿಭಾಗದ ಸಹ ಆಡಳಿತ ಅಧಿಕಾರಿ ಥಾಮಸ್‌ ಝುರುಬುಚೆನ್‌ ತಿಳಿಸಿದ್ದಾರೆ. ‘ಕಳೆದ ಆರು ದಶಕಗಳಿಂದ ಪ್ರಶ್ನೆಯಾಗಿಯೇ ಉಳಿದ ಹಲವು ಸಂಶಯಗಳಿಗೆ ಈ ಯೋಜನೆ ಉತ್ತರ ಒದಗಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.