ADVERTISEMENT

ಸೆರೆಮನೆ ಮೇಲೆ ದಾಳಿ: 384 ಕೈದಿಗಳ ಪರಾರಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಇಲ್ಲಿನ ಸೆರೆಮನೆಯೊಂದರ ಮೇಲೆ ನೂರಕ್ಕೂ ಹೆಚ್ಚು ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಕುಖ್ಯಾತ ಉಗ್ರರು ಸೇರಿದಂತೆ 384 ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಡೆದಿದೆ.

ದೇಶದ ವಾಯವ್ಯ ಭಾಗದ ಭಾನ್ನು ನಗರದಲ್ಲಿನ ಸೆರೆಮನೆ ಮೇಲೆ ಮಧ್ಯಾಹ್ನ 1.30ರಲ್ಲಿ ಉಗ್ರರು ರಾಕೆಟ್ ದಾಳಿ ನಡೆಸಿದರಲ್ಲದೆ ಪ್ರವೇಶ ದ್ವಾರದ ಬಳಿ ಕೈಬಾಂಬ್‌ಗಳನ್ನು ಎಸೆದರು. ಈ ಸಂದರ್ಭವನ್ನು ಬಳಸಿಕೊಂಡು 20ಕ್ಕೂ ಹೆಚ್ಚು ಕುಖ್ಯಾತ ಭಯೋತ್ಪಾದಕರು ಪರಾರಿಯಾಗಿದ್ದಾರೆ ಎಂದು ಖೈಬರ್-ಪಂಕ್ತುಂಖ್ವಾ ಪ್ರಾಂತ್ಯದ ಮಾಹಿತಿ ಸಚಿವ ಇಫ್ತಿಕಾರ್ ಹುಸೇನ್ ತಿಳಿಸಿದ್ದಾರೆ.

ತೆಹ್ರಿಕ್- ಎ- ತಾಲಿಬಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.