ADVERTISEMENT

ಸೌದಿ ಅರೇಬಿಯಾದಲ್ಲಿ ತೆರೆದುಕೊಳ್ಳಲಿದೆ ಸಿನಿಮಾ ಲೋಕ; 35 ವರ್ಷಗಳ ನಿಷೇಧ ಅಂತ್ಯಗೊಳಿಸಲು ನಿರ್ಧಾರ

ಏಜೆನ್ಸೀಸ್
Published 11 ಡಿಸೆಂಬರ್ 2017, 12:56 IST
Last Updated 11 ಡಿಸೆಂಬರ್ 2017, 12:56 IST
ಸೌದಿ ಅರೇಬಿಯಾದಲ್ಲಿ ತೆರೆದುಕೊಳ್ಳಲಿದೆ ಸಿನಿಮಾ ಲೋಕ; 35 ವರ್ಷಗಳ ನಿಷೇಧ ಅಂತ್ಯಗೊಳಿಸಲು ನಿರ್ಧಾರ
ಸೌದಿ ಅರೇಬಿಯಾದಲ್ಲಿ ತೆರೆದುಕೊಳ್ಳಲಿದೆ ಸಿನಿಮಾ ಲೋಕ; 35 ವರ್ಷಗಳ ನಿಷೇಧ ಅಂತ್ಯಗೊಳಿಸಲು ನಿರ್ಧಾರ   

ಸೌದಿ ಅರೇಬಿಯಾ: ಸಿನಿಮಾ ಪ್ರದರ್ಶನದ ಮೇಲಿನ 35 ವರ್ಷಗಳ ನಿಷೇಧ ಅಂತ್ಯಗೊಳಿಸಲು ಸೌದಿ ಅರೇಬಿಯಾ ಆಡಳಿತ ನಿರ್ಧರಿಸಿದ್ದು, 2018ರಿಂದ ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಆಡಿಯೊವಿಶುವಲ್‌ ಮೀಡಿಯಾಗೆ ಸಂಬಂಧಿಸಿದ ಆಯೋಗ(ಜಿಕ್ಯಾಮ್‌)ವು ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡುವ ಸಂಬಂಧ ಸೋಮವಾರ ನಿರ್ಣಯ ತೆಗೆದುಕೊಳ್ಳಲಾಗಿದೆ.

2018ರ ಮಾರ್ಚ್‌ನಲ್ಲಿ ಮೊದಲ ಸಿನಿಮಾ ಪ್ರದರ್ಶನ ಕಾಣುವ ನಿರೀಕ್ಷೆ ಇರುವುದಾಗಿ ಜಿಕ್ಯಾಮ್‌ ಮುಖ್ಯಸ್ಥ ಹಾಗೂ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಅವಾದ್‌ ಅಲಾವಾದ್‌ ಹೇಳಿದ್ದಾರೆ.

ADVERTISEMENT

ಸಿನಿಮಾ ಪ್ರದರ್ಶನದ ನಿರ್ಧಾರ ಬಂಡವಾಳ ಹೂಡಿಕೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಸಚಿವ ಅಲಾವಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲ್ಲಿನ ಸಮಾಜದಲ್ಲಿ ಮೂಲಭೂತವಾದ ಬೆಳೆಯುತ್ತಿದ್ದ ಸಮಯದಲ್ಲಿ 1980ರಿಂದ ಸಿನಿಮಾ ಪ್ರದರ್ಶನ ಕಾನೂನು ಬಾಹಿರಗೊಳಿಸಲಾಗಿದೆ. ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮಗಳ ಭಾಗವಾಗಿ ಸಿನಿಮಾ ಪ್ರದರ್ಶನದ ಮೇಲಿನ ನಿಷೇಧ ತೆರವು ನಿರ್ಣಯ ತೆಗೆದುಕೊಳ್ಳಲಾಗಿದೆ.

ಇದರೊಂದಿಗೆ 2018ರ ಜೂನ್‌ನಿಂದ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ಕಲ್ಪಿಸಲಾಗಿದೆ.

2030ರ ವೇಳೆಗೆ ಸೌದಿಯಲ್ಲಿ 2000 ಸ್ಕ್ರೀನ್‌ಗಳ ಒಟ್ಟು 300 ಚಿತ್ರ ಮಂದಿರಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ 30 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.