ADVERTISEMENT

ಸೌರಮಂಡಲದಾಚೆ ಅಗೋಚರ ಗ್ರಹ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
ಸೌರಮಂಡಲದಾಚೆ ಅಗೋಚರ ಗ್ರಹ
ಸೌರಮಂಡಲದಾಚೆ ಅಗೋಚರ ಗ್ರಹ   

ಲಂಡನ್ (ಪಿಟಿಐ): ನಮ್ಮ ಸೌರವ್ಯೆಹ ವ್ಯವಸ್ಥೆಯಿಂದ ಹೊರಗಿರುವ, ಅಗೋಚರ ಗ್ರಹವೊಂದನ್ನು 150 ವರ್ಷಗಳ ಹಿಂದಿನ ಸಿದ್ಧಾಂತ ಆಧರಿಸಿ ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ.

ನಮ್ಮ ಸೌರವ್ಯೆಹದಿಂದ ಹೊರಗಿರುವ `ಕೆಒಐ-872-0~ ನಕ್ಷತ್ರದ ಸುತ್ತ ತಿರುಗುತ್ತಿರುವ, ನಮ್ಮ ಶನಿ ಗ್ರಹದಷ್ಟು ದೊಡ್ಡದಾದ ಈ ಗ್ರಹವು ಕಣ್ಣಿಗೆ ಕಾಣುವುದಿಲ್ಲ. ಆದರೆ, ಆ ಗ್ರಹದ ಗುರುತ್ವಾಕರ್ಷಣೆ ಶಕ್ತಿಯಿಂದಾಗಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಗಳನ್ನು ಗಮನಿಸಿ ಗ್ರಹದ ಇರುವಿಕೆಯನ್ನು ಪತ್ತೆ ಹಚ್ಚಲಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

150 ವರ್ಷಗಳ ಹಿಂದೆ ಫ್ರಾನ್ಸ್‌ನ ಗಣಿತಶಾಸ್ತ್ರಜ್ಞ ಉರ್ಬೇನ್ ಲಿ ವೇರಿಯರ್ ಅವರು ಯುರೇನಸ್ ಗ್ರಹದ ಚಲನೆಯ ಪಥದಲ್ಲಿನ ಸಣ್ಣ ಬದಲಾವಣೆಗಳನ್ನು ಆಧಾರವಾಗಿಟ್ಟುಕೊಂಡು ನೆಪ್ಚ್ಯೂನ್ ಗ್ರಹದ ಉಪಸ್ಥಿತಿಯನ್ನು ಊಹಿಸಿದ್ದರು.

ಈಗ ಡಾ.ಡೇವಿಡ್  ನೆಸ್ವೊರ್ನಿ ನೇತೃತ್ವದ ಸಂಶೋಧಕರ ತಂಡವು ಅಂದು ವೇರಿಯರ್ ಬಳಸಿದ್ದ `ಗುರುತ್ವಾಕರ್ಷಣೆ ವಿಚಲನ ಸಿದ್ಧಾಂತ~ವನ್ನೇ ಆಧಾರವಾಗಿಟ್ಟುಕೊಂಡು ನಾಸಾದ ಕೆಪ್ಲರ್  ದೂರದರ್ಶಕವನ್ನು ಬಳಸಿ  ಹೊಸ ಗ್ರಹದ ಇರುವಿಕೆಯನ್ನು ಪತ್ತೆಹಚ್ಚಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.