ADVERTISEMENT

ಸ್ಫೋಟ: ಇರಾನ್ ಪರಮಾಣು ವಿಜ್ಞಾನಿ ಬಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಟೆಹರಾನ್ (ಎಎಫ್‌ಪಿ): ಇಲ್ಲಿನ ವಿಶ್ವವಿದ್ಯಾಲಯವೊಂದರ ಹೊರಗಡೆ ಬುಧವಾರ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಇರಾನಿನ ಅಣು ವಿಜ್ಞಾನಿ ಯೊಬ್ಬರು ಅಸುನೀಗಿ, ಇಬ್ಬರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಮೃತ ವಿಜ್ಞಾನಿಯನ್ನು ಮೊಸ್ತಾಫಾ ಅಹಮದಿ ರೋಷನ್ ಎಂದು ಮೂಲಗಳು ಹೇಳಿದ್ದು, ಗಾಯಗೊಂಡಿ ರುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ.

ನೌಕೆಗೆ ಬೆಂಕಿ; ಮೂವರು ಸಾವು

ವೆಲ್ಲಿಂಗ್ಟನ್(ಎಪಿ): ಅಂಟಾರ್ಟಿಕಾ ಬಳಿ ಬುಧವಾರ ಬೆಳಿಗ್ಗೆ ದಕ್ಷಿಣ ಕೊರಿಯಾದ ಮೀನುಗಾರಿಕೆಯ ನೌಕೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಮೀನುಗಾರರು ಮೃತಪಟ್ಟು, ಇತರ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.

ನೌಕೆಯಲ್ಲಿದ್ದ ಸುಮಾರು 37 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕ್ಕೆ ತೆರಳಿರುವ ನೌಕೆಯ ಸಿಬ್ಬಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.