ADVERTISEMENT

ಹಸಿರು ಪರಿಸರದಿಂದ ಮಕ್ಕಳ ಗ್ರಹಿಕಾ ಸಾಮರ್ಥ್ಯ ಹೆಚ್ಚಳ

ಪಿಟಿಐ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಹಸಿರು ಪರಿಸರದಿಂದ ಮಕ್ಕಳ ಗ್ರಹಿಕಾ ಸಾಮರ್ಥ್ಯ ಹೆಚ್ಚಳ
ಹಸಿರು ಪರಿಸರದಿಂದ ಮಕ್ಕಳ ಗ್ರಹಿಕಾ ಸಾಮರ್ಥ್ಯ ಹೆಚ್ಚಳ   

ಲಂಡನ್ : ಉದ್ಯಾನ ಅಥವಾ ಗಿಡಮರಗಳು ಹೆಚ್ಚಾಗಿ ಇರುವಂತಹ ಪ್ರದೇಶಗಳ ಸಮೀಪ ಬೆಳೆಯುವ ಮಕ್ಕಳ ಗ್ರಹಿಕಾ ಸಾಮರ್ಥ್ಯ ಉತ್ತಮವಾಗಿ ಇರುತ್ತದೆ ಎನ್ನುವ ಅಂಶವನ್ನು ಅಧ್ಯಯನ ವೊಂದು ಬಹಿರಂಗಪಡಿಸಿದೆ.

ಸ್ಪೇನ್‌ನ ಬಾರ್ಸಿಲೋನಾ ಜಾಗತಿಕ ಆರೋಗ್ಯ ಸಂಸ್ಥೆಯ (ಐಎಸ್‌ಗ್ಲೋಬಲ್) ಸಂಶೋಧಕರು 1500 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿ ಸಿದ್ಧಪಡಿಸಿದ್ದಾರೆ.

2003–2013ರ ಅವಧಿಯಲ್ಲಿ ಈ ಮಕ್ಕಳ ಕುರಿತು ಅಧ್ಯಯನ ನಡೆಸಲಾಗಿದೆ. ಇವರೆಲ್ಲರೂ ನಾಲ್ಕರಿಂದ ಐದು ಹಾಗೂ ಏಳು ವರ್ಷದ ವಯೋಮಾನದವರಾಗಿದ್ದು, ಮನೆಯ ಆಸುಪಾಸು 100, 300, 500 ಮೀ. ವ್ಯಾಪ್ತಿಯಲ್ಲಿ ಗಿಡಮರಗಳು ಇವೆ.

ADVERTISEMENT

ವಿಷಯ ಕುರಿತು ಯಾವ ಮಟ್ಟದಲ್ಲಿ ಗ್ರಹಿಕಾ ಸಾಮರ್ಥ್ಯ ಇದೆ ಎಂದು ತಿಳಿಯಲು ಪರೀಕ್ಷೆಗಳನ್ನು ನಡೆಸಲಾಗಿದೆ. ಮನೆಯ ಸಮೀಪದಲ್ಲಿ ಹೆಚ್ಚು ಗಿಡಮರಗಳನ್ನು ಹೊಂದಿರುವ ಮಕ್ಕಳಲ್ಲಿ ಗ್ರಹಿಕಾ ಸಾಮರ್ಥ್ಯ ಹೆಚ್ಚಾಗಿರುವುದು ತಿಳಿದುಬಂದಿದೆ.

ಎನ್ವಿರಾನ್‌ಮೆಂಟ್ ಹೆಲ್ತ್ ಪರ್ಸ್ಪೆಕ್ಟಿವ್ಸ್ ಜರ್ನಲ್‌ನಲ್ಲಿ ಈ ವರದಿ ಪ್ರಕಟಗೊಂಡಿದೆ.

ಏಳರಿಂದ ಹತ್ತು ವರ್ಷದ ಒಳಗಿನ ಮಕ್ಕಳು ಹಸಿರು ಪರಿಸರದ ನಡುವೆ ಬೆಳೆದರೆ ಅವರ ಗ್ರಹಿಕಾ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಹಿಂದಿನ ಹಲವು ಅಧ್ಯಯನಗಳಿಂದ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.