ನ್ಯೂಯಾರ್ಕ್ (ಪಿಟಿಐ): ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರಿಗೆ ಹಿರಿಯ ಸಲಹೆಗಾರರಾಗಿ ಭಾರತದ ಶಿಕ್ಷಣತಜ್ಞ ಕೃಷ್ಣ ಪಾಲೆಪು ನೇಮಕಗೊಂಡಿದ್ದಾರೆ.
`ಅವರು ತಕ್ಷಣದಿಂದಲೇ ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ~ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಡ್ರ್ಯೂ ಫಾಸ್ಟ್ ಪ್ರಕಟಿಸಿದ್ದಾರೆ.
ಕೃಷ್ಣ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳಿಂದ ವಾಣಿಜ್ಯ ಆಡಳಿತ ವಿಷಯದ ಬೋಧಕರಾಗಿ ಮತ್ತು ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.