ADVERTISEMENT

ಹಿರಿಯ ನಟ ಖಾದರ್‌ ಖಾನ್‌ ನಿಧನ

ಪಿಟಿಐ
Published 1 ಜನವರಿ 2019, 6:55 IST
Last Updated 1 ಜನವರಿ 2019, 6:55 IST
ಖಾದರ್ ಖಾನ್
ಖಾದರ್ ಖಾನ್   

ಮುಂಬೈ: ಹಿರಿಯ ನಟ ಖಾದರ್‌ ಖಾನ್‌ (81) ಅವರು ಮಂಗಳವಾರ (ಭಾರತೀಯ ಕಾಲಮಾನ ಪ್ರಕಾರ)ನಿಧನರಾದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.

‘ನನ್ನ ತಂದೆ ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರುಕೆನಡಾದ ಸಮಯದ ಪ್ರಕಾರ ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ ಅವರು ನಿಧನರಾಗಿದ್ದಾರೆ. ಮಧ್ಯಾಹ್ನ ನಂತರ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ 16–17 ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆನಡಾದಲ್ಲೇ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಖಾದರ್ ಖಾನ್ ಮಗಸರ್ಫರಾಜ್‌ ತಿಳಿಸಿದ್ದಾರೆ. ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖಾದರ್‌ ಖಾನ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ADVERTISEMENT

300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖಾದರ್‌,1973ರಲ್ಲಿ ರಾಜೇಶ್‌ ಖನ್ನಾ ಅವರ ‘ಡಾಗ್‌’ ಚಿತ್ರದೊಂದಿಗೆ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ನಟನೆ ಆರಂಭಿಸುವ ಮೊದಲು ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದ ಅವರು 250ಕ್ಕೂ ಹಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ‘ಜವಾನಿ ದಿವಾನಿ’ ಇವರು ಸಂಭಾಷಣೆ ಬರೆದ ಮೊದಲ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.