ADVERTISEMENT

ಹುಸಿ ಬಾಂಬ್‌: ವಿದ್ಯಾರ್ಥಿಯೇ ಆರೋಪಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ನ್ಯೂಯಾರ್ಕ್‌ (ಎಎಫ್‌ಪಿ): ಪರೀಕ್ಷೆ­ಯಿಂದ ದೂರ ಉಳಿ ಯಲು ಸೋಮವಾರ ಹಾರ್ವರ್ಡ್‌ ವಿಶ್ವವಿ­ದ್ಯಾ­ಲ­ಯದ ವಿದ್ಯಾರ್ಥಿಯೇ ಹುಸಿ ಬಾಂಬ್‌ ಸಂದೇಶ ಕಳು­ಹಿಸಿದ್ದ ಎನ್ನಲಾಗಿದ್ದು ಈತನನ್ನು ಅಮೆರಿಕದ ಬೋಸ್ಟನ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಜಿಲ್ಲಾ ವಕೀಲರ ಕಚೇರಿ ತಿಳಿಸಿದೆ.

ಹುಸಿ ಬಾಂಬ್‌ ಕರೆ ಮಾಡಿ ಕಾಲೇಜು ಆವರಣದಲ್ಲಿ ಆತಂಕ ಸೃಷ್ಟಿಸಿದ ವಿದ್ಯಾರ್ಥಿ ಇಲ್ಡೊ ಕಿಮ್‌ (20) ತಪ್ಪಿತಸ್ಥನೆಂದು ಸಾಬೀತಾದರೆ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡ ಪಾವತಿಸ­ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.