ADVERTISEMENT

ಹೃದ್ರೋಗ, ಮಧುಮೇಹಕ್ಕೆ ಸ್ಟ್ರಾಬೆರಿ ಮದ್ದು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST

ಲಂಡನ್ (ಐಎಎನ್‌ಎಸ್): ಸ್ಟ್ರಾಬೆರಿ ಹಣ್ಣು ಅನಿರೀಕ್ಷಿತ ಆರೋಗ್ಯ ಲಾಭ ಒದಗಿಸುತ್ತದೆ. ಹೃದಯ ಸಂಬಂಧಿ ರೋಗಗಳ ಹಾಗೂ ಮಧುಮೇಹದ ಬೆಳವಣಿಗೆ ತಡೆಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಹೃದಯ ರಕ್ತನಾಳದ, ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧುಮೇಹದ ಬೆಳವಣಿಗೆಯನ್ನು ತಡೆಯುವುದರ ಕುರಿತಂತೆ ಸ್ಟ್ರಾಬೆರಿ ಹಣ್ಣಿನ ಲಾಭದಾಯಕ ಪರಿಣಾಮಗಳ ಕುರಿತು ವಾರ್ವಿಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.

ನಮ್ಮ ದೇಹದಲ್ಲಿರುವ ಪ್ರೊಟೀನ್ (ಎನ್‌ಆರ್‌ಎಫ್-2) ಅನ್ನು ಸ್ಟ್ರಾಬೆರಿ ಹಣ್ಣು ಧನಾತ್ಮಕವಾಗಿ ಕ್ರಿಯಾಶೀಲಗೊಳಿಸುತ್ತದೆ ಎಂದು ವಾರ್ವಿಕ್ ಮೆಡಿಕಲ್ ಸ್ಕೂಲ್‌ನ ಪ್ರಾಧ್ಯಾಪಕ ಪಾಲ್ ಥೋರ್ನಲ್ಲೈ ಮುಖ್ಯಸ್ಥರಾಗಿರುವ ಸಂಶೋಧನಾ ತಂಡದ ತಜ್ಞರು ಕಂಡು ಹಿಡಿದಿದ್ದಾರೆ. ಅದು ಪ್ರತಿವಿಷ ಮತ್ತಿತರ ಪ್ರತಿರೋಧಕ ಚಟುವಟಿಕೆಗಳನ್ನು ಹೆಚ್ಚಿಸುವುದು ಕಂಡು ಬಂದಿದೆ. 

ಈ ಪ್ರೊಟೀನ್ ರಕ್ತದಲ್ಲಿನ ಮೇದಸ್ಸು, ಕೊಬ್ಬು ಹಾಗೂ ಹೃದಯ ನಾಳದ ಸಮಸ್ಯೆಗಳನ್ನು ತಗ್ಗಿಸುತ್ತದೆ ಎಂದು ವಿವಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.