ADVERTISEMENT

ಹೆಂಡತಿಗೆ ಹೊಡೆಯುವುದು ಗಂಡನ ‘ಹಕ್ಕು’

ಬಾಂಗ್ಲಾದಲ್ಲಿ ಪುರುಷ­ಪ್ರಾಧಾನ್ಯ ಕುರಿತು ಬೆಳಕು ಚೆಲ್ಲುವ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಢಾಕಾ: ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಜಗತ್ತಿನ ಪ್ರಶಂಸೆಗೆ ಗುರಿಯಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಪುರುಷರು ಮಾತ್ರ ಹೆಂಡತಿಯರಿಗೆ ಹೊಡೆಯುವುದೇ ತಮ್ಮ ಕಾನೂನು ಬದ್ಧ ಹಕ್ಕು ಎಂದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಹಾಗೂ  ಢಾಕಾ ಮೂಲದ ಐಸಿಡಿಡಿ­ಆರ್‌ಬಿ ನಿಧಿ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ರೀತಿ ಅಭಿಪ್ರಾಯ­ವ್ಯಕ್ತವಾಗಿದೆ.

ಹಳ್ಳಿಗಳಲ್ಲಿ ವಾಸಿಸುವ ಶೇ. 89 ರಷ್ಟು ಪುರುಷರು, ಪತ್ನಿಯರು ತಪ್ಪು ಮಾಡಿದಲ್ಲಿ ಹೊಡೆಯುವುದು ತಮ್ಮ ಹಕ್ಕು ಎಂದು ಭಾವಿಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈ ಅಧ್ಯಯನ ಬಾಂಗ್ಲಾದೇಶದ ಬಹು­ತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಪುರುಷ ಮಾತ್ರ ಅರ್ಹ ಎಂದು ಬಹುತೇಕ
ಗಂಡಸರು ಯೋಚಿಸುತ್ತಾರೆ ಎಂಬ ವಿಷಯದ ಬಗ್ಗೆ ಅಧ್ಯಯನ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.